ಕುಮಾರಸ್ವಾಮಿ ಗೋಸುಂಬೆ: ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಟೀಕೆ

ಎಚ್‌ಡಿಕೆ ಪ್ರೀತಿ ಬಲು ಅಪಾಯಕಾರಿ ಸ್ಟಿಂಗ್ ಪ್ರಕರಣ ಸಿಬಿಐನಿಂದ ತನಿಖೆ ಮಾಡಿಸಲಿ ಎಂದು ಸಲಹೆ
 ಕುಮಾರಸ್ವಾಮಿ ಗೋಸುಂಬೆ: ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಟೀಕೆ
ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ Kumaraswamy Gosumbe: Municipal Administration Minister H.C. Balakrishna Criticism
Published on: 

ಮೈಸೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗೋಸುಂಬೆ. ಯಾವಾಗ ಹೇಗೆ ಬಣ್ಣ ಬದಲಾಯಿಸುತ್ತಾರೋ ಗೊತ್ತಾಗಲ್ಲ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಟೀಕಿಸಿದರು.

ಈಗ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಎಚ್‌ಡಿಕೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ, ಅವರ ಪ್ರೀತಿ ಅಪಾಯಕಾರಿ. ಅವರ ಈ ಎಲ್ಲ ವಿಚಾರ ಗೊತ್ತಾದ ಮೇಲೆಯೇ ನಾನು ಅವರಿಂದ ದೂರವಾಗಿದ್ದು ಎಂದು ನಗರದಲ್ಲಿ ಗುರುವಾರ ಮಾಧ್ಯಮಕ್ಕೆ ತಿಳಿಸಿದರು.

ಯಾರಾದರೂ ಈ ದೇಶದಲ್ಲಿ ನಿತ್ಯ ಸುದ್ದಿಗೋಷ್ಠಿ ಮಾಡುವ ಕೇಂದ್ರ ಸಚಿವ ಇದ್ದಾರೆಯೇ? ವಾರಕೊಮ್ಮೆ, ತಿಂಗಳಿಗೊಮ್ಮೆ ಮಾತನಾಡುವುದನ್ನು ನೋಡಿದ್ದಿವಿ. ಆದರೆ, ಇವರು ದಿನ ಬೆಳಗ್ಗೆ ಆರೋಪ ಮಾಡುವುದೇ ಕೆಲಸ ಮಾಡಿಕೊಂಡಿದ್ದಾರೆ ಎಂದು ಕುಟುಕಿದರು.

ಎಚ್‌ಡಿಕೆ ಕೇಂದ್ರ ಸಚಿವರು. ಅವರೇ ಮಾರುವೇಷ ಕಾರ್ಯಾಚರಣೆ(ಸ್ಟಿಂಗ್ ಆಪರೇಷನ್) ಪ್ರಕರಣವನ್ನು ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ. ಅವರ ಬಳಿ ಇರುವ ದಾಖಲೆಗಳನ್ನು ಅಲ್ಲಿಗೆ ಕೊಡಲಿ ಎಂದು ಸವಾಲು ಎಸೆದರು.

ಅಪಪ್ರಚಾರ ಮಾಡಬಾರದೆಂದು ಮಾಜಿ ಸಿಎಂ ಸಿದ್ದರಾಮಯ್ಯ ತಡೆಯಾಜ್ಞೆ ತಂದಿದ್ದಾರೆ. ಅದು ಅವರ ನಿರ್ಧಾರ. ನಮ್ಮ ಸರ್ಕಾರದಲ್ಲಿ ಅಂತಹದ್ದು ಯಾವುದು ನಡೆದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net