

ಬೈಲುಕುಪ್ಪೆ: ಮರೂರು ಗ್ರಾಮದ ಗಿರಿಜನ ಹಾಡಿಯ ರಾಣಿಗೇಟ್ ಸಮೀಪ ಇತ್ತೀಚೆಗೆ ಕಾಡಾನೆ ದಾಳಿಗೆ ಕಾರು ಜಖಂಗೊಂಡಿದೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ರಾಜು ಅವರು ಮನೆ ಮುಂದೆ ಎರಡು ಕಾರುಗಳು ನಿಲ್ಲಿಸಿದ್ದರು. ಕಾಡಿನಿಂದ ಗ್ರಾಮಕ್ಕೆ ಬಂದ ಆನೆ ಹೊಳೆ ಮಾರ್ಗವಾಗಿ ವಾಪಸಾಗುವಾಗ ಮನೆಯ ಗೇಟ್ ಮುರಿದು, ಕಾರನ್ನು ಜಖಂಗೊಳಿಸಿದೆ. ನಾಗರಹೊಳೆ ಉಪ ವಲಯ ಅರಣ್ಯಾಧಿಕಾರಿ ದೇವಿ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.