ಎಸ್‌ಐಆರ್ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಚುನಾವಣಾ ಆಯುಕ್ತರ ನೇಮಕ ಕಾಯ್ದೆ ತಿದ್ದುಪಡಿ ಮಾಡಿ ಸಂಯುಕ್ತ ಹೋರಾಟ ಕರ್ನಾಟಕದಿಂದ ಮೈಸೂರಲ್ಲಿ ಪ್ರತಿಭಟನೆ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ
ಎಸ್‌ಐಆರ್ ರದ್ದಿಗೆ ಆಗ್ರಹಿಸಿ ಪ್ರತಿಭಟನೆ
ಎಸ್‌ಐಆರ್ ರದ್ದಿಗೆ ಆಗ್ರಹಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಡಾ.ಪೂರ್ಣಾನಂದ, ಜಗದೀಶ್ ಸೂರ್ಯ, ಪ್ರೊ.ಕಾಳೇಗೌಡ ನಾಗವಾರ, ಗೋಪಾಲ್, ಹರಿಹರ ಆನಂದ ಸ್ವಾಮಿ, ಆಲಗೂಡು ಶಿವಕುಮಾರ್, ದೇವಗಳ್ಳಿ ಸೋಮಶೇಖರ್ ಇನ್ನಿತರರಿದ್ದರು.Protest demanding the cancellation of the SIR
Published on: 

ಮೈಸೂರು: ಎಸ್‌ಐಆರ್ ರದ್ದು ಪಡಿಸಬೇಕು ಹಾಗೂ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಸಿದ್ಧಾರ್ಥನಗರದ ಬುದ್ಧ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಮತದಾರರ ಪಟ್ಟಿಯಿಂದ ಸುಮಾರು 13.41 ಕೋಟಿ ಅರ್ಹ ನಾಗರಿಕರ ಹೆಸರು ಕಿತ್ತು ಹಾಕಲಾಗಿದೆ. ಅವರ ಮತದಾನದ ಹಕ್ಕನ್ನು ತಕ್ಷಣವೇ ಮರು ಸ್ಥಾಪಿಸಬೇಕು. 2023ರ ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆಗೆ ತಿದ್ದುಪಡಿ ತರಬೇಕು. ಪ್ರಧಾನಮಂತ್ರಿ ನಾಮನಿರ್ದೇಶನ ಮಾಡುವ ಕೇಂದ್ರ ಸಚಿವರ ಬದಲಿಗೆ, ಭಾರತದ ಮುಖ್ಯ ನ್ಯಾಯಮೂರ್ತಿ ಆಯ್ಕೆ ಸಮಿತಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.

ಚುನಾವಣೆಯಲ್ಲಿ ಹಣಬಲ, ತೋಳ್ಬಲ ತಡೆಯಬೇಕು. ರಾಜ್ಯದಿಂದಲೇ ಕಾನೂನು ಬದ್ಧವಾಗಿ ಚುನಾವಣಾ ವೆಚ್ಚ ಒದಗಿಸುವ ವ್ಯವಸ್ಥೆ ತರಬೇಕು ಎಂದು ಒತ್ತಾಯಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ನಾಗರಿಕರ ಹಕ್ಕನ್ನು ರದ್ದುಗೊಳಿಸಿರುವ ದೆಹಲಿ ಪೊಲೀಸರ ಕ್ರಮ ಖಂಡನೀಯ ಎಂದು ಕಿಡಿಕಾರಿದರು.

ಬೇಡಿಕೆಗಳು ಏನು...?

ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಪ್ರಮಾಣವಚನ ಉಲ್ಲಂಘಿಸಿರುವ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. 2023ರ ಕಾಯ್ದೆಗೆ ತಿದ್ದುಪಡಿ ತಂದು ಆಯುಕ್ತರ ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿಸಬೇಕು ಎಂದು ಆಗ್ರಹಿಸಿದರು.

ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಬೇಕು. ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲಿನ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಕಾರ್ಯಕರ್ತರ ಮೇಲಿನ ಅಕ್ರಮ ಮನೆ ತಪಾಸಣೆ, ಅಕ್ರಮ ಗೃಹಬಂಧನ ಹಾಗೂ ಪೊಲೀಸ್ ದೌರ್ಜನ್ಯ ತಕ್ಷಣವೇ ನಿಲ್ಲಿಸಬೇಕು. ಕೇಂದ್ರ ಸರ್ಕಾರ ಪ್ರತಿಭಟನಾಕಾರರ ಮೇಲಿನ ದಮನಕಾರಿ ನೀತಿ ಮುಂದುವರಿಸಿದರೆ, ದೇಶಾದ್ಯಂತ ರೈತರು, ದಲಿತರು, ಕಾರ್ಮಿಕರು ಸೇರಿದಂತೆ ಎಲ್ಲ ರಂಗದ ನಾಗರಿಕರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಡಾ.ಪೂರ್ಣಾನಂದ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಪ್ರೊ.ಕಾಳೇಗೌಡ ನಾಗವಾರ, ನೆಲೆಹಿನ್ನೆಲೆ ಗೋಪಾಲ್, ಜನಾರ್ದನ್(ಜೆನ್ನಿ), ಹರಿಹರ ಆನಂದ ಸ್ವಾಮಿ, ಆಲಗೂಡು ಶಿವಕುಮಾರ್, ದೇವಗಳ್ಳಿ ಸೋಮಶೇಖರ್, ಮೆಲ್ಲಳ್ಳಿ ನಾರಾಯಣ್, ನ.ದಿವಾಕರ, ಸವಿತಾ ಮಲ್ಲೇಶ್, ಕಲೀಂ ಪಾಷ, ಎನ್.ವಿಜಯ್ ಕುಮಾರ್, ಲ.ಜಗನ್ನಾಥ್, ಚೋರನಹಳ್ಳಿ ಶಿವಣ್ಣ, ಶಂಬುಲಿಂಗಸ್ವಾಮಿ, ಭೂಮಿಗೌಡ, ಕೆ.ಬಸವರಾಜ್, ಬೀರೇಶ್ವರ್, ಕಂದೇಗಾಲ ಶ್ರೀನಿವಾಸ್, ದೇವದಾಸ್, ಸುಶೀಲಾ, ರತಿರಾವ್, ಮಾಳವಿಕ ಗುಬ್ಬಿವಾಣಿ, ಕುಮಾರಸ್ವಾಮಿ, ಶಿವಕುಮಾರ್, ವರಹಳ್ಳಿ ಆನಂದ್, ಕಲ್ಲಳ್ಳಿ ಕುಮಾರ್, ಜಿ.ರಾಜೇಂದ್ರ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net