

ಮೈಸೂರು: ಚುನಾವಣಾ ಆಯೋಗ ವ್ಯವಸ್ಥಿತವಾಗಿ ಸಂಘಟಿತ ಅಪರಾಧ ಮಾಡುತ್ತಿದ್ದು, ಇದರೊಂದಿಗೆ ಬಿಜೆಪಿಯೂ ಶಾಮೀಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ದೂರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಅಪರಾಧದಲ್ಲಿ ಬಿಜೆಪಿಯವರು ಪಾಲುದಾರರು.
ಮುಸ್ಲಿಮರು ಬಿಜಪಿಗೆ ಮತ ಹಾಕಲ್ಲ ಎಂದು ಅವರ ಮತಗಳನ್ನು ಡೀಲಿಟ್ ಮಾಡಿಸಲಾಗುತ್ತಿದೆ. ಬಿಜೆಪಿವರ ಜತೆಗೆ ಚುನಾವಣಾ ಆಯೋಗ ಸಹ ಕೈಜೋಡಿಸಿದೆ. ನಮಗೆ ಮೊದಲಿನಿಂದಲೂ ಎಸ್‌ಐಆರ್ ಬಗ್ಗೆ ಅನುಮಾನ ಇದೆ. ತಕ್ಷಣವೇ ಎಸ್‌ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಆಗ್ರಹಿಸಿದರು.
ಮುಸ್ಲಿಮರ ಹೆಸರಲ್ಲೇ ಅವರ ಧರ್ಮ ಗೊತ್ತಾಗುತ್ತದೆ. ಹೀಗಾಗಿ ಸುಲಭವಾಗಿ ಅವರ ಹೆಸರಗಳನ್ನು ಡೀಲಿಟ್ ಮಾಡಿಸಲಾಗುತ್ತಿದೆ.
ಮತದಾರರ ಹೆಸರು ರದ್ದು ಪಡಿಸಲು ಒಬ್ಬೊಬ್ಬರೇ ಒಟ್ಟಾಗಿ ಅರ್ಜಿ ತುಂಬಿದರೆ ಅದರ ಅರ್ಥ ಏನು. ಅವರಿಗೆ ಎಲ್ಲ ವೋಟರ್ ಎಪಿಕ್‌ಕಾರ್ಡ್‌ಗಳನ್ನು ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.