ಎಂಐಟಿ ತಾಂತ್ರಿಕ ವಿವಿಗೆ ಐದು ರ‌್ಯಾಂಕ್

ಚಿನ್ನದ ಪದಕ ಗಳಿಸಿದ ಐವರು ವಿದ್ಯಾರ್ಥಿನಿಯರು
ನಂಜನಗೂಡು: ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ತಾಂಡವಪುರದಲ್ಲಿರುವ ಮಹಾರಾಜ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 3 ವಿಭಾಗದಲ್ಲಿ 5 ಚಿನ್ನದ ಪದಕ ಲಭಿಸಿದೆ.
ಚಿನ್ನದ ಪದಕ ಗಳಿಸಿದ ಐವರು ವಿದ್ಯಾರ್ಥಿನಿಯರು
Published on: 

ನಂಜನಗೂಡು: ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ತಾಂಡವಪುರದಲ್ಲಿರುವ ಮಹಾರಾಜ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 3 ವಿಭಾಗದಲ್ಲಿ 5 ಚಿನ್ನದ ಪದಕ ಲಭಿಸಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2025-26ನೇ ಸಾಲಿನ ಶೈಕ್ಷಣಿಕ ಪರೀಕ್ಷೆಯಲ್ಲಿ 150ಕ್ಕೂ ಹೆಚ್ಚು ತಾಂತ್ರಿಕ ಕಾಲೇಜುಗಳು ಮತ್ತು 6,000ಕ್ಕೂ ಹೆಚ್ಚು ತಾಂತ್ರಿಕ ವಿದ್ಯಾರ್ಥಿಗಳು ಭಾಗವಹಿಸಿದ್ದ ಪರೀಕ್ಷೆಯಲ್ಲಿ ಎಂಐಟಿ ತಾಂಡವಪುರ ವಿಶ್ವವಿದ್ಯಾಲಯವು 5 ರ‌್ಯಾಂಕ್ ಗಳಿಸಿ ಚಿನ್ನದ ಪದಕಗಳನ್ನು ಪಡೆದಿದೆ.

ಸಿವಿಲ್ ವಿಭಾಗದಿಂದ ತನುಷಾ ನಿಂಗರಾಜು ಮೂರನೇ ರ‌್ಯಾಂಕ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿಭಾಗದಿಂದ ಎಂ.ಕೀರ್ತನಾ 5ನೇ ರ‌್ಯಾಂಕ್, ಎಚ್.ಸಿ.ದಿವ್ಯಶ್ರೀ 6ನೇ ರ‌್ಯಾಂಕ್, ಮಂಜುಶ್ರೀ 10ನೇ ರ‌್ಯಾಂಕ್, ಮೆಕಾನಿಕಲ್ ವಿಭಾಗದಿಂದ ಸಿ.ಆರ್.ಸ್ಮಿತಾ 7ನೇ ರ‌್ಯಾಂಕ್ ಗಳಿಸಿದ್ದಾರೆ.

5 ರ‌್ಯಾಂಕ್‌ನಲ್ಲಿ ಚಿನ್ನದ ಪದಕಗಳನ್ನು ಗಳಿಸಿರುವುದು ವಿದ್ಯಾರ್ಥಿನಿಯರೇ ಎಂಬುದು ವಿಶೇಷ. ಉತ್ತಮ ಅಂಕ ಗಳಿಸಿ ರ‌್ಯಾಂಕ್ ಗಳಿಸಿದ ಐವರು ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ವೈ.ಟಿ.ಕೃಷ್ಣೇಗೌಡ ಸನ್ಮಾನಿಸಿದರು.