ಉತ್ತಮ ಆರೋಗ್ಯಕ್ಕೆ ಪೌರಕಾರ್ಮಿಕರ ಕಾಯಕವೇ ಕಾರಣ

ಬನ್ನೂರು ಪುರಸಭೆ ಮುಖ್ಯಾಧಿಕಾರಿ ಸತೀಶ್ ಅಭಿಮತ
ಬನ್ನೂರಿನಲ್ಲಿ ಪೌರಕಾರ್ಮಿಕರ ದಿನದ ಅಂಗವಾಗಿ ಬುಧವಾರ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಸತೀಶ್, ಪುಟ್ಟರಾಜು,  ವಿನುತಾ, ಸೋಮಪ್ರಭಾ, ಬಸವರಾಜು, ಸುಭಾಷ್, ಹರಿಪ್ರಸಾದ್, ಪ್ರೇಮಾ, ನಸೀಂ ಅಜುಂ, ಕೆ.ನಂಜಪ್ಪ ಬಸವನಗುಡಿ ಇದ್ದರು.
ಬನ್ನೂರಿನಲ್ಲಿ ಪೌರಕಾರ್ಮಿಕರ ದಿನದ ಅಂಗವಾಗಿ ಬುಧವಾರ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಸತೀಶ್, ಪುಟ್ಟರಾಜು, ವಿನುತಾ, ಸೋಮಪ್ರಭಾ, ಬಸವರಾಜು, ಸುಭಾಷ್, ಹರಿಪ್ರಸಾದ್, ಪ್ರೇಮಾ, ನಸೀಂ ಅಜುಂ, ಕೆ.ನಂಜಪ್ಪ ಬಸವನಗುಡಿ ಇದ್ದರು.
Published on: 

ಬನ್ನೂರು: ಪ್ರತಿ ನಿತ್ಯ ಸಾರ್ವಜನಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಮುಖ್ಯಾಧಿಕಾರಿ ಸತೀಶ್ ತಿಳಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೌರಕಾರ್ಮಿಕ ದಿನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪ್ರತಿನಿತ್ಯ ತಮ್ಮ ಕಾಯಕದ ಮೂಲಕ ಇಡೀ ನಗರವನ್ನು ಸ್ಪಚ್ಛಂದವಾಗಿ ನೋಡಿಕೊಳ್ಳುವ ಮೂಲಕ ಪ್ರತಿ ಮುನುಷ್ಯನ ಉತ್ತಮ ಆರೋಗ್ಯಕ್ಕೆ ಪೌರಕಾರ್ಮಿಕರ ಕಾಯಕವೇ ಕಾರಣ. ಇವರನ್ನು ಸನ್ಮಾನಿಸಿ, ಗೌರವಿಸುತ್ತಿರುವುದು ಹರ್ಷ ತಂದಿದೆ ಎಂದರು.

ಜಿಲ್ಲಾ ಸಫಾಯಿ ಕರ್ಮಚಾರಿ ಹಿತರಕ್ಷಣಾ ಜಾಗೃತಿ ಸಮಿತಿ ಸದಸ್ಯ ಕೆ.ನಂಜಪ್ಪ ಬಸವನಗುಡಿ, ಪಟ್ಟಣದ ಪೌರಕಾರ್ಮಿಕರಿಗೆ ನೆಲ ನಿವೇಶನ ನೀಡಬೇಕು. ಪೌಕಾರ್ಮಿಕರಿಗೆ ಉತ್ತಮ ಆಹಾರ ವಿತರಣೆ ಆಗಬೇಕು. ಪ್ರಸ್ತುತ ಹೊಸದಾಗಿ ನೇಮಕಾತಿ ಆಗಿರುವಂತಹ ಪೌರಕಾರ್ಮಿಕರಿಗೆ ಸರ್ಕಾರದಿಂದ ವೇತನ ನೀಡಬೇಕು ಎಂದು ಹೇಳಿದರು.

ನಂತರ ಪೌರಕಾರ್ಮಿಕ ಏರ್ಪಡಿಸಿದ್ದ ವಿವಿಧ ಆಟೋಟಗಳಲ್ಲಿ ಭಾಗಿಯಾಗಿ ಜಯ ಗಳಿಸಿದಂತ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಸತೀಶ್, ಸಮುದಾಯ ಸಂಘಟನಾಧಿಕಾರಿ ಪುಟ್ಟರಾಜು, ಕಚೇರಿ ವ್ಯವಸ್ಥಾಪಕಿ ವಿನುತಾ, ಲೆಕ್ಕಾಧಿಕಾರಿ ಸೋಮಪ್ರಭಾ, ಕಂದಾಯ ಅಧಿಕಾರಿ ಬಸುರಾಜು, ಕಂದಾಯ ನಿರೀಕ್ಷಕ ಸುಭಾಷ್, ಹಿರಿಯ ಆರೋಗ್ಯ ನಿರೀಕ್ಷಕರಾದ ಹರಿಪ್ರಸಾದ್, ಪ್ರೇಮಾ, ಪರಿಸರ ಇಂಜಿನಿಯರ್ ನಸೀಂ ಅಜುಂ, ಕಾಂತರಾಜು, ಅಗಾಸ್, ಅರುಣ್, ಪುಷ್ಪಲತಾ, ನಾಗೇಂದ್ರ, ಸವಿತಾ, ಶಿವಲಿಂಗು, ಅತ್ತಹಳ್ಳಿ ಜಯರಾಮೇಗೌಡ, ಗೋವಿಂದ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net