ಇಂಜಿನಿಯರ್ ಬ್ಯಾಂಕ್ ಖಾತೆಗೆ ಕನ್ನ

1.97 ಕೋಟಿ ರೂ. ಭಾರಿ ವಂಚನೆ
Engineer's bank account is closed.
ಬ್ಯಾಂಕ್ ಖಾತೆಗೆ ಕನ್ನ
Published on

ಮೈಸೂರು: ಇಂಜಿನಿಯರ್ ಒಬ್ಬರ ಮೊಬೈಲನ್ನು ರಿಮೋಟ್ ಆಕ್ಸೆಸ್ ಟ್ರೋಜನ್ (ಆರ್‌ಎಟಿ) ಮೂಲಕ ನಿಯಂತ್ರಣಕ್ಕೆ ತೆಗೆದುಕೊಂಡು ವಿವಿಧ ಹಂತಗಳಲ್ಲಿ 1.97 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಯಾದವಗಿರಿಯ ಸುಗೋಸ್ ನಾಗೇಂದ್ರ ವಂಚಕರಿಂದ ಹಣ ಕಳೆದುಕೊಂಡವರು. ಸೈಬರ್ ದಾಳಿ ನಡೆಸಿದ ವಂಚಕರು, ಸುಗೋಸ್ ನಾಗೇಂದ್ರ ಮೊಬೈಲ್‌ಗೆ ಎಸ್‌ಎಂಎಸ್ ಕಳುಹಿಸಿದ್ದಾರೆ. ಎಸ್‌ಎಂಎಸ್ ಅನ್ನು ಕ್ಲಿಕ್ ಮಾಡಿದಾಗ ರಿಮೋಟ್ ಆಕ್ಸೆಸ್ ಟ್ರೋಜನ್ (ಆರ್‌ಎಟಿ) ಮೂಲಕ ಅವರ ಮೊಬೈಲನ್ನು ನಿಯಂತ್ರಣಕ್ಕೆ ಪಡೆದ ವಂಚಕರು, ಅವರ 8 ಉಳಿತಾಯ ಖಾತೆ, 3 ಕ್ರೆಡಿಟ್ ಕಾರ್ಡ್ ಖಾತೆಗಳಿಂದ 1,97,44,215 ರೂ. ಹಣವನ್ನು ದೋಚಿದ್ದಾರೆ.

2021ರ ಸೆಪ್ಟೆಂಬರ್‌ನಿಂದ 2025ರ ನವೆಂಬರ್‌ವರೆಗೂ ಈ ಕೃತ್ಯ ನಡೆಸಿದ್ದು ನಿರಂತರವಾಗಿ ಪ್ರಯತ್ನ ಮಾಡಿದರೂ ಹಣ ವಾಪಸ್ ಬಾರದ ಕಾರಣ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net