ಮೈಸೂರು: ಅಭಿವೃದ್ಧಿಯನ್ನು ಕೇವಲ ಆರ್ಥಿಕ ಬೆಳವಣಿಗೆ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. ಅದರೊಂದಿಗೆ ಸಾವಾಜಿಕ ಅಭಿವೃದ್ಧಿಯನ್ನೂ ಪರಿಗಣಿಸಬೇಕು ಎಂದು ರಾಜಕೀಯ ವಿಜ್ಞಾನಿ ಪ್ರೊ. ಗೋಪಾಲ ಗುರು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ, ರಾಜ್ಯಶಾಸ ಹಾಗೂ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಸಹಯೋಗದಲ್ಲಿ ನಗರದ ವಾನಸಗಂಗೋತ್ರಿಯ ವಾನವಿಕ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪ್ರೊ. ವಿ.ಕೆ.ನಟರಾಜ್: ಒಬ್ಬ ವಿಮರ್ಶಾತ್ಮಕ ಸವಾಜ ವಿಜ್ಞಾನಿ’ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಾತನಾಡಿದರು.
ಸಮಾಜದ ಎಲ್ಲ ವರ್ಗಗಳಿಗೂ ಅಭಿವೃದ್ಧಿಯ ಲಾಭ ತಲುಪಿದಾಗ ವಾತ್ರ ಅದು ಸಾರ್ಥಕವಾಗುತ್ತದೆ. ತಳ ಸಮುದಾಯಗಳ ಪ್ರಗತಿಯನ್ನು ನಿರ್ಲಕ್ಷಿೃಸಿದರೆ ದೇಶದ ಒಟ್ಟಾರೆ ಅಭಿವೃದ್ಧಿಯೂ ಕುಂಠಿತವಾಗಲಿದೆ ಎಂದೂ ಹೇಳಿದರು.
ದೇಶದ ಸಮಗ್ರ ಅಭಿವೃದ್ಧಿಯು ತಳ ಸಮುದಾಯಗಳ ಪ್ರಗತಿಯನ್ನು ಅವಲಂಬಿಸಿದೆ. ಸಾವಾಜಿಕ ನ್ಯಾಯ ಹಾಗೂ ಹಂಚಿಕೆ ನ್ಯಾಯಕ್ಕೆ ಆದ್ಯತೆ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿ ಮತ್ತು ಸಾವಾಜಿಕ ಸಬಲೀಕರಣಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಒಳಗೊಳ್ಳುವಿಕೆ ನೀತಿಯಾಗಬೇಕು. ಒಳಗೊಳ್ಳುವಿಕೆಯ ಸವಾಜ ನಿರ್ವಾಣವಾಗಬೇಕಾದರೆ ಒಳಗೊಳ್ಳುವಿಕೆ ಅಭಿವೃದ್ಧಿಯ ಗುರಿಯಾಗಿ ವಾತ್ರ ಉಳಿಯದೆ, ಅನುಷ್ಠಾನ ಯೋಗ್ಯ ಸಾರ್ವಜನಿಕ ನೀತಿ ಆಗಬೇಕು. ರಾಜ್ಯದಲ್ಲಿ ಮೀಸಲಾತಿ ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸುವ ಅಗತ್ಯ ಇದೆ. ಜಾತಿ ವ್ಯವಸ್ಥೆಯಲ್ಲಿ ಬೇರೂರಿರುವ ಅಸವಾನತೆಗಳು ಸಾವಾಜಿಕ ಪ್ರಜಾಪ್ರಭುತ್ವಕ್ಕೆ ಆತಂಕಕಾರಿ. ಅದನ್ನು ಪರಿಹರಿಸಲು ಪ್ರಗತಿಪರ ಯೋಜನೆಯನ್ನು ರಾಜಕೀಯ ವ್ಯವಸ್ಥೆ ಬದ್ಧತೆಯಿಂದ ಅನುಷ್ಠಾನಕ್ಕೆ ತರಬೇಕು ಎಂದರು.
ಅಭಿವೃದ್ಧಿ ಏಕಮುಖ ಪ್ರಕ್ರಿಯೆಯಾಗಿ ಪರಿಗಣಿಸದೆ, ಬಹು ಆಯಾಮವನ್ನು ಒಳಗೊಂಡ ಪರಿಕಲ್ಪನೆಯಾಗಿ ಪರಿಗಣಿಸಬೇಕು ಎಂಬುದು ಪ್ರೊ. ವಿ.ಕೆ.ನಟರಾಜ್ ಅವರ ನಿಲುವಾಗಿತ್ತು. ತಮ್ಮ ವೃತ್ತಿ ಜೀವನದುದ್ದಕ್ಕೂ ಅಭಿವೃದ್ಧಿ ಅಧ್ಯಯನದ ವಿವಿಧ ಶಾಖೆಗಳ ಜ್ಞಾನ ವಿಸ್ತರಣೆಗೂ ಶ್ರಮಿಸಿದ್ದರು. ಅಭಿವೃದ್ಧಿ ಅಧ್ಯಯನದ ಕುರಿತು ಆಳವಾದ ಸಂಶೋಧನೆ ನಡೆಸಲು ವಿದ್ಯಾರ್ಥಿಗಳು, ಸಂಶೋಧಕರು, ಸಹೋದ್ಯೋಗಿಗಳನ್ನು ಉತ್ತೇಜಿಸಿದ್ದರು ಎಂದು ಸ್ಮರಿಸಿದರು.
ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಸೀಮಿತವಾಗದೆ, ಸಮಸ್ತ ಜನರ ಸುಖಮಯ ಜೀವನಕ್ಕೆ ಪೂರಕವಾದ ನೀತಿ ರೂಪಿಸಿ ಪರಿಣಾಮಕಾರಿ ಜಾರಿಗೊಳಿಸಬೇಕು. ಆಗಲೇ ಸಾವಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ ಎಂಬುದು ಪ್ರೊ. ವಿ.ಕೆ. ನಟರಾಜ್ ಅವರ ಅಭಿವೃದ್ಧಿ ಚಿಂತನೆಯ ಸಾರವಾಗಿತ್ತು ಎಂದು ತಿಳಿಸಿದರು.
ಸವಾಜಶಾಸಜ್ಞೆ ಪ್ರೊ. ಆರ್.ಇಂದಿರಾ, ಮೈವಿವಿ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಕೃಷ್ಣ ಹೊಂಬಾಳ್, ಡಾ. ಬಿ.ಆರ್.ಅಂಬೇಡ್ಕರ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ಜೆ.ಸೋಮಶೇಖರ್ ಇನ್ನಿತರರಿದ್ದರು.