ಆರ್ಥಿಕ ಅಭಿವೃದ್ಧಿಗೆ ಸರ್ಕಾರದ ಸವಲತ್ತು ಒಳಸಿಕೊಳ್ಳಿ

ಶಾಸಕ ಡಿ.ರವಿಶಂಕರ್ ಸಲಹೆ
 ಹನಸೋಗೆ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಾಧಕರಿಗೆ ಸನ್ಮಾನ.. ಶಾಸಕ ರವಿಶಂಕರ್.ಯ.ಚಲುವನಾಯಕ.ಮಂಜುನಾಥ್,ಸಂಘದ ಅಧ್ಯಕ್ಷ ಸಿ ಸಿ ಮಹದೇವ್.ದೇವರಾಜ್,ಇತರರು.
ಹನಸೋಗೆ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಸಾಧಕರಿಗೆ ಸನ್ಮಾನ.. ಶಾಸಕ ರವಿಶಂಕರ್.ಯ.ಚಲುವನಾಯಕ.ಮಂಜುನಾಥ್,ಸಂಘದ ಅಧ್ಯಕ್ಷ ಸಿ ಸಿ ಮಹದೇವ್.ದೇವರಾಜ್,ಇತರರು.
Published on: 

ಸಾಲಿಗ್ರಾಮ: ಯುವಕರು ಮತ್ತು ಮಹಿಳೆಯರು ಆರ್ಥಿಕ ಅಭಿವೃದ್ಧಿ ಹೊಂದಲು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.

ತಾಲೂಕಿನ ಹನಸೋಗೆ ಗ್ರಾಮದಲ್ಲಿ ಗುರುವಾರ ನಾಯಕ ಸಮಾಜದಿಂದ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಅವಳಿ ತಾಲೂಕಿನಲ್ಲಿ ವಾಲ್ಮೀಕಿ ಸಮಾಜದ ಭವನಗಳ ನಿರ್ಮಾಣಕ್ಕೆ ಸುಮಾರು 6 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದ್ದೇನೆ. ಹನಸೋಗೆ ಗ್ರಾಮದಲ್ಲಿ ಸಮುದಾಯ ಭವನ ಅರ್ಧಕ್ಕೆ ನಿಂತಿದ್ದು, ಈ ಬಗ್ಗೆ ಗ್ರಾಮದ ಮುಖಂಡರು ನನ್ನ ಗಮನಕ್ಕೆ ತಂದಿದ್ದರು. ಭರವಸೆಯಂತೆ ಸಮುದಾಯ ಭವನ ನಿರ್ಮಿಸಲಾಗಿದೆ ಎಂದರು.

ಈ ವರ್ಷ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗಿ ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ. ಪ್ರತಿಯೊಬ್ಬರು ವಾಲ್ಮೀಕಿ ಅವರ ಆದರ್ಶ ಗುಣಗಳು ಮತ್ತು ರಾಮಾಯಣದ ಬಗ್ಗೆ ತಿಳಿದುಕೊಂಡು ಅದರ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ವಾಲ್ಮೀಕಿ ಅವರು ಒಂದೇ ಸಮಾಜಕ್ಕೆ ಸೀಮಿತವಲ್ಲ. ಅವರ ಆದರ್ಶಗಳು ಎಲ್ಲ ಸಮಾಜಕ್ಕೂ ಬೇಕಾಗಿದೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಮಂಜುನಾಥ್ ಮಾತನಾಡಿ, ವಾಲ್ಮೀಕಿ ಕೊಟ್ಟ ಆದರ್ಶಗಳು ಮತ್ತು ಕಂಡಂತಹ ಕನಸುಗಳು ನನಸಾಗಬೇಕು ಎಂದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಾಮಾಜಿಕ ಜ್ಞಾನ ಅರಿತುಕೊಳ್ಳಬೇಕು. ವಾಲ್ಮೀಕಿಯವರು ಇಡೀ ಜಗತ್ತೇ ಮೆಚ್ಚುವಂತಹ ರಾಮಾಯಣ ಎಂಬ ಕಾವ್ಯ ಬರೆದರು. ಆದರೆ ಅದರಲ್ಲಿ ಬರುವ ಪ್ರತಿ ಅಂಶಗಳು ಮಾನವ ಕುಲಕ್ಕೆ ಬಹುಮುಖ್ಯವಾಗಿ ಬೇಕಾಗಿವೆ ಎಂದರು.

ದೇವರಾಜ್ ಕಾರ್ಟೂನ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಸಾಲಿಗ್ರಾಮ ಸಂದೇಶ್, ತಿಮ್ಮೇಗೌಡ, ಅಂಜತ್, ಲಕ್ಷ್ಮಣ, ಚೆಲುವನಾಯಕ, ಚಿಕ್ಕ ಯಜಮಾನ್ ವಸಂತ, ಕೃಷ್ಣನಾಯಕ, ಶಿವಣ್ಣ, ಶ್ರೀನಿವಾಸ್, ಒಲೆರಾಮನಾಯಕ, ಚಂದ್ರನಾಯಕ, ನವೀನ್, ಪರಮೇಶ್, ಪ್ರಸನ್ನ, ಮಹದೇವಪ್ಪ, ರಾಜಣ್ಣ, ಲೋಕೇಶ್, ಹಾಡ್ಯ ಕೃಷ್ಣನಾಯಕ ಇತರರು ಇದ್ದರು.