ಆದಿವಾಸಿ ಕುಟುಂಬಕ್ಕೆ ಪೌಷ್ಟಿಕ ಆಹಾರ ಕಿಟ್

ಶಾಸಕ ಜಿ.ಡಿ.ಹರೀಶ್‌ಗೌಡ ವಿತರಣೆ
ಹುಣಸೂರು ತಾಲೂಕು ಅಂಬೇಡ್ಕರ್ ನಗರದಲ್ಲಿ ಆದಿವಾಸಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ವಿತರಿಸಿದರು. ಎಂ.ಬಿ.ಸುರೇಂದ್ರ, ಜಮೀರ್, ಶಿವಲಿಂಗ, ಶಂಕರ್, ಶೇಖರ ಇತರರು ಇದ್ದರು.
ಹುಣಸೂರು ತಾಲೂಕು ಅಂಬೇಡ್ಕರ್ ನಗರದಲ್ಲಿ ಆದಿವಾಸಿಗಳಿಗೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಶಾಸಕ ಜಿ.ಡಿ.ಹರೀಶ್‌ಗೌಡ ವಿತರಿಸಿದರು. ಎಂ.ಬಿ.ಸುರೇಂದ್ರ, ಜಮೀರ್, ಶಿವಲಿಂಗ, ಶಂಕರ್, ಶೇಖರ ಇತರರು ಇದ್ದರು. Nutritious food kit for a tribal family
Published on: 

ಹುಣಸೂರು: ತಾಲೂಕಿನ ಬಾಚಳ್ಳಿರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ವಾಸವಿರುವ 27 ಆದಿವಾಸಿ ಕುಟುಂಬಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.

ಶನಿವಾರ ಗಿರಿಜನ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ಆದಿವಾಸಿ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿ, 3 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಕಡಲೆಬೀಜ,1 ಕೆ.ಜಿ. ಕಡಲೆಕಾಳು, 1 ಕೆ.ಜಿ. ಅಲಸಂದೆ ಕಾಳು, 1 ಕೆ.ಜಿ. ಹೆಸರು ಕಾಳು, 1 ಕೆ.ಜಿ ಹುರುಳಿ ಕಾಳು, 1 ಕೆ.ಜಿ ಸಕ್ಕರೆ, 1 ಕೆ.ಜಿ ಬೆಲ್ಲ, 30 ಕೋಳಿ ಮೊಟ್ಟೆ, 2 ಲೀ. ಅಡುಗೆ ಎಣ್ಣೆ, 1 ಕೆ.ಜಿ. ತುಪ್ಪ ಮುಂತಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ವತಿಯಿಂದ ಕೊಡುವ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯು ಬಾಚಳ್ಳಿ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ 27 ಆದಿವಾಸಿ ಕುಟುಂಬಗಳಿಗೆ ಹಲವು ಕಾರಣಗಳಿಂದ ಈ ಹಿಂದೆ ಕೊಡಲಾಗುತ್ತಿರಲಿಲ್ಲ. ಈ ಬಗ್ಗೆ ಪರ-ವಿರೋಧವಿರುವ ಕಾರಣದಿಂದ ಅಧಿಕಾರಿಗಳಲ್ಲಿ ಗೊಂದಲವಾಗಿ ಇಷ್ಟು ದಿನಗಳ ಕಾಲ ವಿಳಂಬವಾಗಲು ಕಾರಣವಾಯಿತು. ಇದೀಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಸಮಗ್ರವಾಗಿ ತನಿಖೆ ಮಾಡಿ ಅಧೀನ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಈ 27 ಆದಿವಾಸಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ಮಂಜೂರು ಮಾಡಿಕೊಟ್ಟಿದ್ದಾರೆ ಎಂದರು.

ಈ ಪೌಷ್ಟಿಕ ಆಹಾರದಿಂದ ಆದಿವಾಸಿ ಕುಟುಂಬಗಳಾದ ತಾವು ಕುಟುಂಬದವರೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಯಾರೂ ಈ ಪೌಷ್ಟಿಕ ಆಹಾರಗಳನ್ನು ಮಾರಾಟ ಮಾಡಬಾರದು. ಹಾಗೇನಾದರೂ ಕಂಡು ಬಂದಲ್ಲಿ ಅಂತಹ ಕುಟುಂಬದವರಿಗೆ ಪೌಷ್ಟಿಕ ಆಹಾರಗಳನ್ನು ರದ್ದುಪಡಿಸಲಾಗುವುದು ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ಕಳೆದ 5 ವರ್ಷಗಳಿಂದ ಆದಿವಾಸಿ ಕುಟುಂಬಗಳಿಗೆ ಪೌಷ್ಟಿಕ ಆಹಾರಗಳನ್ನು ಮಂಜೂರು ಮಾಡಿಕೊಡುವಂತೆ ಎಸ್‌ಸಿ / ಎಸ್.ಟಿ ಸಭೆಗಳಲ್ಲಿ ಮತ್ತು ಇತರ ಸಭೆಗಳಲ್ಲಿ ಮತ್ತು ಪ್ರತಿಭಟನೆಯ ಮೂಲಕ ಹೋರಾಟ ಮಾಡುತ್ತಾ ಬರುತ್ತಿತ್ತು. ಕೆಲವು ಮುಖಂಡರು ಈ ಕುಟುಂಬಗಳಿಗೆ ಪೌಷ್ಟಿಕ ಆಹಾರಗಳನ್ನು ಕೊಡಬಾರದು ಎಂದು ಅಧಿಕಾರಿ ಇಲ್ಲ ಸಲ್ಲದ ದೂರುಗಳನ್ನು ನೀಡಿದ್ದರು. ಈ ಕುಟುಂಬಗಳ ಎಲ್ಲ ದಾಖಲಾತಿಗಳು ಸಾಮಾಜಿಕ ಸ್ಥಿತಿ, ಇವರ ಬದುಕು, ಸಂಪ್ರದಾಯ ಇವೆಲ್ಲವನ್ನೂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಜಿಲ್ಲಾಧಿಕಾರಿ ಸಭೆಯ ನಿರ್ಣಯದಂತೆ ಈ ಕುಟುಂಬಗಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿದೆ. ಈ ಯೋಜನೆಯ ಸದುಪಯೋಗವನ್ನು ಎಲ್ಲ ಕುಟುಂಬಗಳು ಪಡೆದುಕೊಂಡು ಆರೋಗ್ಯವಂತಹ ಜೀವನ ನಡೆಸಬೇಕೆಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ನಾಗನಹಳ್ಳಿ ಮಾದೇವ, ರಾಜು ಚಿಕ್ಕಹುಣಸೂರು, ಕೆಂಪರಾಜು ಸೋಮನಹಳ್ಳಿ, ತಾಲೂಕು ಜೆಡಿಎಸ್ ಅಧ್ಯಕ್ಷ ಸುರೇಂದ್ರ, ಗ್ರಾಪಂ ಮಾಜಿ ಸದಸ್ಯ ಶಿವಲಿಂಗ, ಜಮೀರ್, ಅಂಬೇಡ್ಕರ್ ನಗರದ ನಿವಾಸಿಗಳಾದ ವಸಂತ, ಕಣ್ಣಮ್ಮ, ಗೋಪಾಲ, ಶಂಕರ, ಶೇಖರ, ಹರೀಶ, ಪೌರಕಾರ್ಮಿಕ ಮುಖಂಡರಾದ ಮುರುಗೇಶ ಮತ್ತಿತರರು ಭಾಗವಹಿಸಿದ್ದರು.