ಉದ್ಯಾನದ ಕಂಬಿ ಚುಚ್ಚಿ ಯುವಕ ಸಾವು

ರವಿಕುಮಾರ್
ರವಿಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಮೃಗಾಲಯದ ಬಳಿ ಕಬ್ಬಿನಹಾಲು ವ್ಯಾಪಾರ ಮಾಡುತ್ತಿದ್ದ
  • ಇತ್ತೀಚೆಗೆ ಕುಡಿತದ ಚಟಕ್ಕೆ ದಾಸನಾಗಿದ್ದ. ಸರಿಯಾಗಿ ವ್ಯಾಪಾರ ನಡೆಸದೆ ಅಲೆಯುತ್ತಿದ್ದ
ಮೈಸೂರು: ಉದ್ಯಾನದ ಕಂಬಿ ಚುಚ್ಚಿ ಯುವಕನೊಬ್ಬ ಮೃತಪಟ್ಟಿದ್ದಾನೆ. ರಾಜೀವ್‌ನಗರದ ರವಿಕುಮಾರ್ (38) ಮೃತ.
ನಗರದ ಮೃಗಾಲಯದ ಬಳಿ ಕಬ್ಬಿನಹಾಲು ವ್ಯಾಪಾರ ಮಾಡುತ್ತಿದ್ದ ರವಿಕುಮಾರ್ ಇತ್ತೀಚೆಗೆ ಕುಡಿತದ ಚಟಕ್ಕೆ ದಾಸನಾಗಿದ್ದ. ಸರಿಯಾಗಿ ವ್ಯಾಪಾರ ನಡೆಸದೆ ಅಲೆಯುತ್ತಿದ್ದ, ಶನಿವಾರ ಮಧ್ಯರಾತ್ರಿ ಮನೆ ಬಿಟ್ಟು ಹೋಗಿದ್ದ ಆತ
ಪೊಲೀಸ್ ಕಮೀಷನರ್ ಕಚೇರಿ ಬಳಿಯ ಮಕ್ಕಳ ಸಂಚಾರ ಜಾಗೃತಿ ಉದ್ಯಾನ ದಾಟಲು ಹೋಗಿದ್ದಾಗ ಚೂಪಾದ ಕಂಬಿ ಹೊಟ್ಟೆಯ ಭಾಗಕ್ಕೆ ಬಲವಾಗಿ ಚುಚ್ಚಿಕೊಂಡಿದೆ. ಇದರಿಂದ ಮೇಲೇಳಲು ಆಗದೆ ಅಲ್ಲೇ ಸಿಲುಕಿದ್ದು, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಬೆಳಗ್ಗೆ ಸಾರ್ವಜನಿಕರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಜರ್‌ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net