ಬನ್ನಿಕುಪ್ಪೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹುಣಸೂರು ತಾಲೂಕು ಸಿಂಗಾರಮಾರನಹಳ್ಳಿ, ಗೆಜ್ಜೆಯನ ವಡ್ಡರಗುಡಿ ಮತ್ತು ರತ್ನಪುರಿ ಊಯಿಗೊಂಡನಹಳ್ಳಿಯಲ್ಲಿ ಗ್ರಾಮದಲ್ಲಿ ಮಹಿಳಾ ಮತ್ತು ಪುರುಷ ರೈತರಿಗೆ ಹೂವಿನ ಕೃಷಿ ಯಂತ್ರೋಪಕರಣಗಳು ಹಾಗೂ ನೆಲ ಜಲ ಸಂರಕ್ಷಣೆ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಹರಗು ಕೃಷಿಕ ಚಲುವರಾಜು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಸುರೇಶ್, ಕೃಷಿ ಅಧಿಕಾರಿ ಮಹೇಶ್, ಸೇವಾ ಪ್ರತಿನಿಧಿ ರುಕ್ಮಿಣಿ, ಪೂರ್ಣಿಮಾ, ಮುಖಂಡರಾದ ಭೈರಪ್ಪಗೌಡ, ಚನ್ನಬಸವಯ್ಯ ಸ್ವಾಮಿ, ದೇವರಾಜ್, ನಾಗರಾಜು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.