ಸಮಾಜಕ್ಕೆ ಸ್ಫೂರ್ತಿ ನೀಡುವ ಕೃತಿಗಳು ಯುವಕರಿಗೆ ಮಾರ್ಗದರ್ಶಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ

ಭಾರತೀ ಪ್ರಕಾಶನದಿಂದ ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಅವರ ಸಾಧನೆಯ ಶಿಖರ ಕೃತಿಯನ್ನು ಬಸವರಾಜ ಎಸ್.ಹೊರಟ್ಟಿ ಬಿಡುಗಡೆ ಮಾಡಿದರು. ಕೆ.ಶಿವಕುಮಾರ್, ಮದನಗೌಡ, ಶಿವಾನಂದ ತಗಡೂರು, ಪ್ರಕಾಶ್ ಬಾಬು, ಕೂಡ್ಲಿ ಗುರುರಾಜ್, ಬಿ.ಎನ್. ಶ್ರೀನಿವಾಸ್ ಇದ್ದರು.
ಭಾರತೀ ಪ್ರಕಾಶನದಿಂದ ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಅವರ ಸಾಧನೆಯ ಶಿಖರ ಕೃತಿಯನ್ನು ಬಸವರಾಜ ಎಸ್.ಹೊರಟ್ಟಿ ಬಿಡುಗಡೆ ಮಾಡಿದರು. ಕೆ.ಶಿವಕುಮಾರ್, ಮದನಗೌಡ, ಶಿವಾನಂದ ತಗಡೂರು, ಪ್ರಕಾಶ್ ಬಾಬು, ಕೂಡ್ಲಿ ಗುರುರಾಜ್, ಬಿ.ಎನ್. ಶ್ರೀನಿವಾಸ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜದಲ್ಲಿ ಎತ್ತರಕ್ಕೆ ಬೆಳೆದು ಮಾದರಿಯಾಗಿರುವ ವ್ಯಕ್ತಿಗಳ ಪರಿಚಯವನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡುವ ಕೆಲಸ ಆಗಬೇಕು
  • ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದ್ದು, ಈ ಪರಂಪರೆ ಹೀಗೆ ಮುಂದುವರಿಯಬೇಕು
ಮೈಸೂರು:ವ್ಯಕ್ತಿಗಳ ಸಾಧನೆಗಳನ್ನು ದಾಖಲಿಸಿ ಸಮಾಜಕ್ಕೆ ಸ್ಫೂರ್ತಿ ನೀಡುವ ಕೃತಿಗಳು ಯುವಜನತೆಗೆ ಮಾರ್ಗದರ್ಶಿಯಾಗುತ್ತವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅಭಿಪ್ರಾಯಪಟ್ಟರು.
ಭಾರತೀ ಪ್ರಕಾಶನದಿಂದ ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಅವರ ‘ಸಾಧನೆಯ ಶಿಖರ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಸಮಾಜದಲ್ಲಿ ಎತ್ತರಕ್ಕೆ ಬೆಳೆದವರು ಮಾದರಿಯಾಗಿರುವ ವ್ಯಕ್ತಿಗಳ ಪರಿಚಯವನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡುವ ಕೆಲಸ ಆಗಬೇಕು. ಇದರಿಂದ ಅವರ ಆದರ್ಶ, ಕಾರ್ಯಗಳು ಸಮಾಜಕ್ಕೆ ತಿಳಿಯುತ್ತವೆ. ಇದಕ್ಕೆ ಪೂರಕವಾಗಿ ಪತ್ರಕರ್ತ ಕೂಡ್ಲಿ ಗುರುರಾಜ್ ಅವರು, 70ಕ್ಕೂ ಹೆಚ್ಚು ಜನರ ಜೀವನ ಚಿತ್ರಣವನ್ನು ‘ಸಾಧನೆಯ ಶಿಖರ’ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಇಂದು ಎಲ್ಲ ರಂಗಗಳು ಬದಲಾವಣೆಗೊಂಡಿದ್ದು, ಕಾಲ ಬದಲಾದಂತೆ ಮಾಧ್ಯಮ ಕ್ಷೇತ್ರವೂ ಬದಲಾಗಿದೆ. ಮಾಧ್ಯಮಗಳು ಆಡಳಿತವ ವರ್ಗದ ತಪ್ಪನ್ನು ತೋರಿಸುವ ಮತ್ತು ಪ್ರಶ್ನಿಸುವ ಮೂಲಕ ಆಡಳಿತ ಯಂತ್ರವನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕು. ಈ ಮೂಲಕ ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದ್ದು, ಈ ಪರಂಪರೆ ಹೀಗೆ ಮುಂದುವರಿಯಬೇಕು ಎಂದು ಹೇಳಿದರು.
ಹಿರಿಯ ಪತ್ರರ್ತರ ಮದನಗೌಡ ಮಾತನಾಡಿ, ಅಂಕಣಗಳು ಜನರಿಗೆ ಹೆಚ್ಚಿನ ಮಾಹಿತಿ ನೀಡುವ ಕಣಜಗಳಾಗಿವೆ. ವ್ಯಕ್ತಿ-ವಿಶೇಷ ಅಂಕಣಗಳು ಓದುಗರಿಂದ ಉತ್ತಮ ಸ್ಪಂದನೆ ಪಡೆದಿದ್ದು ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಶಾಶ್ವತ ದಾಖಲೆಯನ್ನಾಗಿ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿ, ಪತ್ರಿಕೋದ್ಯಮವು ಕೇವಲ ಸುದ್ದಿಗಳನ್ನು ದಾಖಲಿಸುವ ಮಾಧ್ಯಮವಲ್ಲ. ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನು ಪರಿಚಯಿಸುವ ಜವಾಬ್ದಾರಿಯನ್ನೂ ಹೊಂದಿದೆ ಎಂದು ಹೇಳಿದರು.
ಲೇಖಕ ಪ್ರಕಾಶ್ ಬಾಬು ಪುಸ್ತಕ ಕುರಿತು ಮಾತನಾಡಿ, ಸುದ್ದಿಮನೆಯೊಳಗಿದ್ದುಕೊಂಡು ಲೇಖಕರಾಗುವುದು ಕಷ್ಟ. ಸುದ್ದಿ ಮನೆಯ ಚೌಕಟ್ಟು ಮೀರಿ ಓದುಗ ಕೃತಿ ರಚಿಸುವುದು ಸುಲಭ ಅಲ್ಲ. ಆ ಕಾರ್ಯವನ್ನು ಕೂಡ್ಲಿ ಗುರುರಾಜ ಮಾಡಿ ತೋರಿಸಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತ ಕೂಡ್ಲಿ ಗುರುರಾಜ್, ಭಾರತೀ ಪ್ರಕಾಶನದ ಬಿ.ಎನ್.ಶ್ರೀನಿವಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net