ಮಹಿಳೆಯರ ಶಕ್ತಿಯೇ ಸಮಾಜದ ಬುನಾದಿ:ಜೋತಿಷಿ ಚಂದ ಪಾಂಡೆ ಅಮ್ಮಜಿ ಅಭಿಮತ

ಪಿಆರ್‌ಕೆ ಫೌಂಡೇಷನ್ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ಚಂದ ಪಾಂಡೆ ಅಮ್ಮಜಿ, ಕೆ.ಬಿ.ಲಿಂಗರಾಜು, ಡಾ.ಹೇಮಾ ನಂದೀಶ್, ಅಯ್ಯಪ್ಪ, ಮಂಜುಳಾ ಸೋಮಣ್ಣ, ಶ್ರುತಿ, ರೇಖಾ ಶ್ರೀನಿವಾಸ್ ಇತರರು ಇದ್ದರು.
ಪಿಆರ್‌ಕೆ ಫೌಂಡೇಷನ್ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ಚಂದ ಪಾಂಡೆ ಅಮ್ಮಜಿ, ಕೆ.ಬಿ.ಲಿಂಗರಾಜು, ಡಾ.ಹೇಮಾ ನಂದೀಶ್, ಅಯ್ಯಪ್ಪ, ಮಂಜುಳಾ ಸೋಮಣ್ಣ, ಶ್ರುತಿ, ರೇಖಾ ಶ್ರೀನಿವಾಸ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರ ದೃಢಸಂಕಲ್ಪ, ಶಕ್ತಿಯೇ ಸಮಾಜದ ಬುನಾದಿ
  • ರಾಮಾಯಣ, ಮಹಾಭಾರತ, ಪುರಾಣಗಳಲ್ಲಿಯೂ ಮಹಿಳೆಯರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ
ಮೈಸೂರು:ಇತಿಹಾಸದ ಉದ್ದಕ್ಕೂ ಮಹಿಳೆಯರು ತಮ್ಮ ಅಪ್ರತಿಮ ದೃಢಸಂಕಲ್ಪ ತ್ಯಾಗ ಮತ್ತು ಶಕ್ತಿಯ ಮೂಲಕ ಸಮಾಜವನ್ನು ರೂಪಿಸುತ್ತಾ ಬಂದಿದ್ದಾರೆ ಎಂದು ಸಮಾಜ ಸೇವಕರೂ ಆದ ಜೋತಿಷಿ ಚಂದ ಪಾಂಡೆ ಅಮ್ಮಜಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಆರ್‌ಕೆ ಫೌಂಡೇಷನ್ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ಮಹಿಳೆಯರ ದೃಢಸಂಕಲ್ಪ, ಶಕ್ತಿಯೇ ಸಮಾಜದ ಬುನಾದಿ. ಹೀಗಾಗಿ ಇತಿಹಾಸ ಉದ್ದಕ್ಕೂ ಮಹಿಳೆಯರ ಪಾತ್ರ ಹಿರಿದಾಗಿಯೇ ಇದೆ. ರಾಮಾಯಣ, ಮಹಾಭಾರತ, ಪುರಾಣಗಳಲ್ಲಿಯೂ ಮಹಿಳೆಯರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ ಎಂದು ಹೇಳಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ಶಿಕ್ಷಣ ವ್ಯಾಪಾರ, ವಿಜ್ಞಾನ, ಕಲೆ, ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಮನೆಗೆ ಬೆಳಕಾಗುವ ಹೆಣ್ಣು ದೇಶದ ಅಭಿವೃದ್ಧಿಗೂ ಅಷ್ಟೇ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಡಾ.ಹೇಮಾ ನಂದೀಶ್ ಮಾತನಾಡಿ, ಲಿಂಗ ಸಮಾನತೆಗಾಗಿ ಪ್ರತಿಪಾದಿಸಿದರ ಜತೆಗೆ ಮಹಿಳೆಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಸದೃಢರಾಗಬೇಕಾಗಿದೆ. ಪ್ರಸ್ತುತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಚಂದ ಪಾಂಡೆ ಅಮ್ಮಜಿ, ಜ್ಯೋತಿ ಪ್ರಭಾ (ಜ್ಯೋತಿಷ್ಯ), ವಿಜಯಲಕ್ಷ್ಮೀ ಆರ್.ಎನ್.ಅಯ್ಯಂಗಾರ್, ಎಂ.ಪೂರ್ಣಿಮಾ (ಸಮಾಜ ಸೇವ್ರೆ), ಸಿ.ಎಸ್.ನಾಗರತ್ನಮ್ಮ (ಪಿಟೀಲು ವಾದಕಿ), ಬಿ.ಕೆ.ವಿಜಯಲಕ್ಷ್ಮೀ (ವೀಣಾ ವಾದನ), ರೇವತಿ ಕೃಷ್ಣಪ್ಪ (ಶಿಕ್ಷಣ), ಎಂ.ದಿವ್ಯಾ (ಕ್ರೀಡಾ), ವಿದುಷಿ ಸಹನಾ ಚೇತನ್ (ನೃತ್ಯ) ಎನ್.ಜಯಲಕ್ಷ್ಮೀ (ಕರಕುಶಲ), ಪೂಜಶ್ರೀ (ಸಾಮಾಜಿಕ ಕ್ಷೇತ್ರ ), ಕೋಮಲಮನಿ (ವೈದ್ಯಕೀಯ ಕ್ಷೇತ್ರ), ಶ್ರುತಿ (ಸಂಘಟನಾ ಕ್ಷೇತ್ರ), ಸಿಂಚನಾ (ಸಾಮಾಜಿಕ), ಸೋನಾ (ಮಾಧ್ಯಮ ಕ್ಷೇತ್ರ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಿಆರ್‌ಕೆ ಫೌಂಡೇಷನ್ ಲೋಗೋವನ್ನು ಸಂಸ್ಥೆಯ ಅಧ್ಯಕ್ಷ ಅಯ್ಯಪ್ಪ ಉದ್ಘಾಟಿಸಿದರು. ಫೌಂಡೇಷನ್‌ನ ಮಂಜುಳಾ ಸೋಮಣ್ಣ, ಶ್ರುತಿ, ಶ್ರೀ ದುರ್ಗಾ ಪೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net