ಹೀಗೆ ಹಂತ ಹಂತವಾಗಿ 1.74 ಲಕ್ಷ ರೂ. ಪಾವತಿಸಿದ ಮಹಿಳೆ, ರೇಟಿಂಗ್ಸ್ ಟಾಸ್ಕ್ ಪೂರೈಸಿದ ಬಳಿಕ ಕಮಿಷನ್ ಹಣ ಕೇಳಿದ್ದಾರೆ. ಆಗ ಹ್ಯಾಂಡ್ಲಿಂಗ್ ಫೀ, ಇನ್‌ಕಮ್ ಟ್ಯಾಕ್ಸ್, ಲಾಂಡರಿಂಗ್ ಫೀ ಪಾವತಿಸಬೇಕೆಂದು ತಿಳಿಸಿ, 2.74 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.