ಭಕ್ತಿ ಇರುವೆಡೆ ಭಗವಂತ ನೆಲೆ

 ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನಾ ಧಾರ್ಮಿಕ ಕಾರ್ಯಕ್ರಮವನ್ನು ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಸಾಹಿತಿ ರಮೇಶ್, ಗೌಡಿಕೆ ನಾಗಣ್ಣ, ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಇತರರು ಇದ್ದರು.
ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನಾ ಧಾರ್ಮಿಕ ಕಾರ್ಯಕ್ರಮವನ್ನು ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಸಾಹಿತಿ ರಮೇಶ್, ಗೌಡಿಕೆ ನಾಗಣ್ಣ, ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಇತರರು ಇದ್ದರು.
Published on
ನಂಜನಗೂಡು: ನದಿಗಳು ಎಲ್ಲೋ ಹುಟ್ಟಿ, ಎಲ್ಲೋ ಹರಿಯುತ್ತವೆ. ಭಕ್ತಿಯು ನದಿಗಳಂತೆ ನಿರಂತರವಾಗಿ ಹರಿಯುತ್ತಿರಬೇಕು. ಭಯದಿಂದ ಭಕ್ತಿ ಅಲ್ಲ, ಪ್ರೀತಿಯಿಂದ ಮಾತ್ರ ಭಕ್ತಿ ಮೂಡುತ್ತದೆ ಎಂದು ಸುತ್ತೂರು ವೀರಸಿಂಹಾಸನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ತಾಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ಮಹದೇಶ್ವರ ದೇಗುಲವನ್ನು ಉದ್ಘಾಟಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಹದೇಶ್ವರನ ಬಗ್ಗೆ ಇರುವ ಜಾನಪದ ಸಾಹಿತ್ಯ ಮತ್ತು ಪರಂಪರೆ ಈ ಭಾಗದಲ್ಲಿ ವಿಶೇಷವಾಗಿದೆ. ಮಹದೇಶ್ವರರನ್ನು ಭಕ್ತರು ಹಲವು ಹೆಸರುಗಳಲ್ಲಿ ಕರೆಯುತ್ತಾರೆ. ಕಾಡು ಪ್ರದೇಶಗಳಲ್ಲಿ ಮಹದೇಶ್ವರರು ಸಂಚರಿಸಿರುವ ಇತಿಹಾಸವಿದೆ. ಅಂದಿನ ದಿನಗಳಲ್ಲಿ ಕಾಡಿನ ಸಂಸ್ಕೃತಿಯ ಬಗ್ಗೆ ಮಹದೇಶ್ವರರು ಸಾರಿದರು. ಜನರ ಪರಿಸ್ಥಿತಿಗಾಗಿ ಪವಾಡ ಪುರುಷರಾಗಿದ್ದಾರೆ. ಕರ್ನಾಟಕ ತಮಿಳುನಾಡಿನ ಭಾಗದಲ್ಲಿ ಮನೆಮಾತಾಗಿದ್ದಾರೆ. ಮಾದಪ್ಪನ ಸನ್ನಿಧಿಗೆ ಹೋಗಲು ಬಡವ-ಶ್ರೀಮಂತ ಎಂಬ ಭೇದ ಇಲ್ಲ. ಲಕ್ಷಾಂತರ ಜನರು ಮಾದಪ್ಪನ ಸನ್ನಿಧಿಗೆ ಹೋಗಿ ಬಯಲಿನಲ್ಲಿಯೇ ಮಲಗಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ ಎಂದರು.
ದೇಶದ ಪ್ರತಿ ಗ್ರಾಮಗಳಲ್ಲೂ ದೇವಸ್ಥಾನಗಳಿವೆ. ಮನುಷ್ಯ ಶಾಶ್ವತವಾಗಿ ನಂಬಿಕೆ ಇಟ್ಟುಕೊಂಡಿದ್ದಾನೆ. ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಭಗವಂತ ನೆಲೆಸುತ್ತಾನೆ. ಧ್ಯಾನ ಮಾಡಿದರೆ ಅಲ್ಲಿ ದೇವರು ನೆಲೆಸುತ್ತಾನೆ. ನಂಬಿಕೆಯೇ ದೇವರು. ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಜ್ಞಾನ ಕೇಂದ್ರಗಳಾಗಿವೆ. ಕಲಾ ಸೇವೆ ತೋರ್ಪಡಿಸಲು ದೇವಸ್ಥಾನಗಳು ಪ್ರಮುಖ ಕೇಂದ್ರಗಳಾಗಿವೆ. ಇಂದು ಎಷ್ಟೋ ಜನರಿಗೆ ಪ್ರಪಂಚದ ಜ್ಞಾನವೇ ಇರುವುದಿಲ್ಲ. ಗ್ಯಾಸ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಆದಾಗ ಮಾತ್ರ ಜಗತ್ತಿನ ಬದಲಾವಣೆ ತಿಳಿಯುತ್ತದೆ ಎಂದರು.
ಸಾಹಿತಿ ಮು.ನಾ.ರಮೇಶ್ ಮಾತನಾಡಿ, ನಂಜನಗೂಡು ತಾಲೂಕು ಮಠ ಮಾನ್ಯಗಳು, ದೇವಸ್ಥಾನಗಳಿಗೆ ಜನರು ವಿಶೇಷ ಗೌರವ ಸಲ್ಲಿಸುತ್ತಾರೆ. ದೇವಾಲಯಗಳು ಜೀವ ಚೈತನ್ಯ ತಂದುಕೊಡುತ್ತವೆ. ಮಹದೇಶ್ವರನ ಬಗ್ಗೆ ಹಲವಾರು ಜಾನಪದ ಹಾಡುಗಳು, ಕಥೆಗಳು ಮೂಡಿಬಂದಿವೆ. ಮಹದೇಶ್ವರರು ಸುತ್ತೂರಿನಲ್ಲಿ ನೆಲೆಸಿದ ಸಂದರ್ಭದಲ್ಲಿ ರಾಗಿ ಕಲ್ಲಿನ ಮೂಲಕ ರಾಗಿ ಬೀಸಿ ಕಾಯಕದ ಮಹತ್ವ ಸಾರಿದರು ಎಂದರು.
ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡಿನ ಭಾಗದಲ್ಲಿ ಶ್ರೀ ಮಹದೇಶ್ವರರು 13 ಮತ್ತು 14ನೇ ಶತಮಾನದಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಭಕ್ತರು ಹೇಳುವ ಪ್ರಕಾರ ಶ್ರೀಮಂತರಿಗೆ ತಿರುಪತಿ ತಿಮ್ಮಪ್ಪ, ಬಡವರಿಗೆ ಮಾದಪ್ಪ ಎಂಬ ಮಾತನ್ನು ಭಕ್ತರೇ ತಿಳಿಸುತ್ತಾರೆ ಎಂದರು.
ಧಾರ್ಮಿಕ ಸಭೆಯಲ್ಲಿ ಮುಡುಕನಪುರದ ಷಡಕ್ಷರಿ ದೇಶಕೇಂದ್ರ ಸ್ವಾಮೀಜಿ, ಬರಡನಪುರದ ಪರಶಿವಮೂರ್ತಿ ಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲ ಸ್ವಾಮೀಜಿ, ಕಂತೆ ಮಹದೇಶ್ವರ ಬೆಟ್ಟದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಡಗೂರಿನ ಶಿವಲಿಂಗೇಂದ್ರ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಹಂಚಿಪುರದ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಡಾ.ಷಡಕ್ಷರ ಸ್ವಾಮೀಜಿ, ಮರಿಯಾಲ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಶಿರಮಳ್ಳಿ ಮಠದ ಇಮ್ಮಡಿ ಮುರುಘ ಸ್ವಾಮೀಜಿ, ನವಿಲೂರಿನ ಚನ್ನಬಸವ ಸ್ವಾಮೀಜಿ, ಕುರಹಟ್ಟಿ ಮಠದ ಮಾದಪ್ಪ ಸ್ವಾಮೀಜಿ, ಗೌಡಿಕೆ ನಾಗಣ್ಣ, ಚಿಕ್ಕ ಗೌಡಿಕೆ ರೇವಣ್ಣ, ಮಹದೇವಪ್ಪ, ರಾಜು, ಉಪನ್ಯಾಸಕ ಯೋಗೇಶ್, ವಕೀಲ ಎಚ್.ಎಂ.ಮಂಜುನಾಥ್, ಪರಮೇಶ್, ನವೀನ್‌ಕುಮಾರ್ ಜೆ ಕೇಬಲ್ ಜಗದೀಶ್, ಶಂಕರ್ ವೀರಭದ್ರಪ್ಪ, ಜಗದೀಶ್, ನಾಗಣ್ಣ, ಮಹದೇವಪ್ಪ, ಸಿದ್ದರಾಜು, ಶಿವು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net