ಮತದಾರರ ಹಕ್ಕುಗಳನ್ನು ಕಸಿಯಬಾರದು

ಮತದಾರರ ಹಕ್ಕು
ಮತದಾರರ ಹಕ್ಕು
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಕಮ್ಯೂನಿಸ್ಟ್ ಪಕ್ಷ ಸಲಹೆ
  • ಅಪರ ಜಿಲ್ಲಾಧಿಕಾರಿಗೆ ಮನವಿ ಪತ್ರ
ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾರರ ಹಕ್ಕು ಕಸಿಯಬಾರದು ಎಂದು ಒತ್ತಾಯಿಸಿ, ಪ್ರತಿಯೊಬ್ಬರ ಮತದಾನದ ಸಂವಿಧಾನಿಕ ಹಕ್ಕನ್ನು ಕಾಪಾಡಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದಿಂದ ಸಲಹೆಗಳನ್ನು ಪರಿಗಣಿಸಿ ಕ್ರಮವಹಿಸುವಂತೆ ಗುರುವಾರ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮ್ಯಾಚಿಂಗ್ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರು ಮ್ಯಾಪಿಂಗ್ ಆಗದೆ ಹೊರಗುಳಿಯುತ್ತಿದ್ದಾರೆ. ರಾಜ್ಯದಲ್ಲಿ ಜೂ.30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಸಮಸ್ಯೆಗಳು ಅಲ್ಲಿಂದಲೇ ಹೆಚ್ಚಾಗಲಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮೃತಪಟ್ಟವರು, ನಕಲಿ ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡವರನ್ನು ಮತದಾರರ ಪಟ್ಟಿಯಿಂದ ಹೊರಹಾಕುವ ಪ್ರಕ್ರಿಯೆ ಪ್ರತಿವರ್ಷ ನಡೆಯುತ್ತದೆ. ಆದರೆ, ಅದರ ನೆಪದಲ್ಲಿ ಕೋಟ್ಯಂತರ ಬಡಜನರು, ಕೂಲಿಕಾರರು, ವಲಸೆ ಕಾರ್ಮಿಕರು, ಮಹಿಳೆಯರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ತಳ ಸಮುದಾಯಗಳ ಜನರ ಮತದಾನದ ಹಕ್ಕನ್ನೇ ಕಸಿಯುವ ಅಪಾಯ ಉಂಟು ಮಾಡುತ್ತಿದೆ. ದೇಶದಲ್ಲಿ ಈಗಾಗಲೇ ಎಸ್‌ಐಆರ್ ನಡೆಸಲಾಗಿರುವ ರಾಜ್ಯಗಳಲ್ಲಿ ಸುಮಾರು 6.5. ಕೋಟಿ ಜನ ಮತದಾರರು ಪಟ್ಟಿಯಿಂದ ಹೊರಗುಳಿಯುವಂತಾಗಿದೆ ಎಂದು ದೂರಿದರು.
ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಮುಖಂಡರಾದ ಎನ್.ವಿಜಯ್ ಕುಮಾರ್, ಜಿ.ಜಯರಾಂ, ಸುಬ್ರಹ್ಮಣ್ಯ, ಶ್ರೀಧರ್, ಪುಟ್ಟ ಮಲ್ಲಯ್ಯ, ನೂರ್ ಮಚೆರ್ಂಟ್, ಅಸ್ಲಂ ಮಚೆರ್ಂಟ್, ರಹಮಾನ್ ಷರೀಫ್, ಅರ್ಬಾಝ್ ಖಾನ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net