ಮೈಸೂರಿನಲ್ಲಿ ಸುಧಾ ಮೂರ್ತಿ ಕುರಿತ ವಿಶ್ವೇಶ್ವರಿ ಕೃತಿ ಬಿಡುಗಡೆ

ಡಾ.ಎನ್. ವಾಸಯ್ಯ ಅವರ ಸಂಪಾದಕತ್ವದಲ್ಲಿ ಹೊರತಂದಿರುವ ಇನ್ಫೋಸಿಸ್‌ನ ಡಾ. ಸುಧಾ ಮೂರ್ತಿ ಕುರಿತ ‘ವಿಶ್ವೇಶ್ವರಿ’ ಕೃತಿಯನ್ನು ನಗರದಲ್ಲಿ ಬಿಡುಗಡೆ ಮಾಡಲಾಯಿತು. ಪ್ರೊ. ನೀಲಗಿರಿ ಎಂ. ತಳವಾರ್, ಎಚ್.ವಿ.ರಾಜೀವ್, ಡಾ.ಮಾಲಿನಿ ಅಭ್ಯಂಕರ್, ಎಂ. ಚಂದ್ರಶೇಖರ್, ಡಾ.ಎನ್. ವಾಸಯ್ಯ ಇದ್ದರು.
ಡಾ.ಎನ್. ವಾಸಯ್ಯ ಅವರ ಸಂಪಾದಕತ್ವದಲ್ಲಿ ಹೊರತಂದಿರುವ ಇನ್ಫೋಸಿಸ್‌ನ ಡಾ. ಸುಧಾ ಮೂರ್ತಿ ಕುರಿತ ‘ವಿಶ್ವೇಶ್ವರಿ’ ಕೃತಿಯನ್ನು ನಗರದಲ್ಲಿ ಬಿಡುಗಡೆ ಮಾಡಲಾಯಿತು. ಪ್ರೊ. ನೀಲಗಿರಿ ಎಂ. ತಳವಾರ್, ಎಚ್.ವಿ.ರಾಜೀವ್, ಡಾ.ಮಾಲಿನಿ ಅಭ್ಯಂಕರ್, ಎಂ. ಚಂದ್ರಶೇಖರ್, ಡಾ.ಎನ್. ವಾಸಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ತ್ರೀವಾದಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದೆಯೇ ನಿಂತ ಸುಧಾಮೂರ್ತಿ, ನಾಡಿನ ಪ್ರಮುಖ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ
  • ಅಷ್ಟು ಎತ್ತರಕ್ಕೆ ಬೆಳೆದರೂ ಸಾಮಾನ್ಯರಲ್ಲಿ ಸಾಮಾನ್ಯರು ಎಂಬಂತೆ ಇದ್ದಾರೆ
ಮೈಸೂರು:ಡಾ.ಎನ್.ವಾಸಯ್ಯ ಅವರ ಸಂಪಾದಕತ್ವದಲ್ಲಿ ಪ್ರಕಟಣೆಗೊಂಡಿರುವ ಇನ್ಫೋಸಿಸ್‌ನ ಡಾ.ಸುಧಾ ಮೂರ್ತಿ ಕುರಿತ ‘ವಿಶ್ವೇಶ್ವರಿ’ ಕೃತಿಯನ್ನು ನಗರದಲ್ಲಿ ಅನಾವರಣಗೊಳಿಸಲಾಯಿತು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ಕೃತಿ ಬಿಡುಗಡೆಗೊಳಿಸಿ, ಸುಧಾ ಮೂರ್ತಿ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಕುರಿತ 26 ಲೇಖನಗಳನ್ನು ಈ ಕೃತಿ ಒಳಗೊಂಡಿದೆ ಎಂದು ತಿಳಿಸಿದರು.
ಹೆಸರಾಂತ ಉದ್ಯಮಿ, ಸಾಹಿತಿ ಆಗಿದ್ದರೂ ಸುಧಾ ಮೂರ್ತಿ ಅವರು ನಾರಾಯಣ ಮೂರ್ತಿ ಅವರಿಗೆ ಭರವಸೆಯ ಬೆಳಕಾಗಿ ನಿಂತವರು. ಸ್ತ್ರೀವಾದಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದೆಯೇ ನಿಂತ ಅವರು, ನಾಡಿನ ಪ್ರಮುಖ ಲೇಖಕಿಯರಲ್ಲಿ ಒಬ್ಬರಾಗಿದ್ದಾರೆ ಎಂದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸುಧಾ ಮೂರ್ತಿ ಕನ್ನಡಿಗರ ಹೆಮ್ಮೆ. ಎಷ್ಟು ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿರುವ ಇವರು ಎಲ್ಲರಿಗೂ ಆಶಾವಾದವಾಗಿದ್ದಾರೆ. ಅಷ್ಟು ಎತ್ತರಕ್ಕೆ ಬೆಳೆದರೂ ಸಾಮಾನ್ಯರಲ್ಲಿ ಸಾಮಾನ್ಯರು ಎಂಬಂತೆ ಇದ್ದಾರೆ. ಸರ್ಕಾರವನ್ನು ಟೀಕಿಸುವವರು ಹಲವರು, ಆದರೆ ಸಮಾಜಕ್ಕೆ ನಾನೇನು ಮಾಡಬಲ್ಲೆ ಎಂದು ಪ್ರಶ್ನಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವವರು ಕಡಿಮೆ. ಈ ಸಾಲಿಗೆ ಸುಧಾ ಮೂರ್ತಿ ನಿಲ್ಲುವವರಾಗಿದ್ದು, ಇವರ ಸಮಾಜಮುಖಿ ಕಾರ್ಯಗಳು ಅಸಂಖ್ಯಾತ ಎಂದರು.
ಕೃತಿ ಕುರಿತ ಭಾರತೀಯ ಭಾಷಾ ಸಂಸ್ಥಾನದ ಹಿರಿಯ ಫೆಲೋ ಡಾ. ಮಾಲಿನಿ ಅಭ್ಯಂಕರ್ ಮಾತನಾಡಿ, ಶ್ರೀಮಂತಿಕೆಯ ಇರುವಿಕೆ ಲವಲೇಶವೂ ಸುಳಿಯದಂತೆ ನೋಡಿಕೊಂಡು ಸಾಗುತ್ತಿರುವ ಸುಧಾ ಮೂರ್ತಿ ನಾಡು, ದೇಶ, ವಿಶ್ವಕ್ಕೆ ಆದರ್ಶ ಮಹಿಳೆಯಾಗಿದ್ದಾರೆ. ಹೀಗಾಗಿ ವಿಶ್ವೇಶ್ವರಿ ಎಂಬ ಶೀರ್ಷಿಕೆ ಕೃತಿಗೆ ಸಕಾಲಿಕವಾದುದು. ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಕುರಿತ ಈ ಕೃತಿ ಯುವ ಪೀಳಿಗೆಗೆ ಬೆಳಕು ನೀಡಬಹುದಾಗಿದೆ ಎಂದರು.
ಕೃತಿಯ ಸಂಪಾದಕ ಡಾ.ಎನ್.ವಾಸಯ್ಯ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net