ಮೈಸೂರಿನ ವಿದ್ಯಾವರ್ಧಕ ಸಂಘದ ಇತ್ತೀಚೆಗೆ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗುಂಡಪ್ಪಗೌಡ, ಪಿ.ವಿಶ್ವನಾಥ್ , ಬಿ. ಶಿವಲಿಂಗಪ್ಪ, ಶ್ರೀಶೈಲ ರಾಮಣ್ಣವರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐದು ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿ
ಇಬ್ಬರು ಸದಸ್ಯರನ್ನು ಹೊರತುಪಡಿಸಿ, ಹಿಂದಿನ ಬಹುತೇಕ ಸಮಿತಿಯೇ ಮರು ಆಯ್ಕೆ
ಮೈಸೂರು:ವಿದ್ಯಾವರ್ಧಕ ಸಂಘದ ಇತ್ತೀಚೆಗೆ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂಘದ ಸದಸ್ಯರ ನಡುವಿನ ವ್ಯಾಪಕ ಒಮ್ಮತ ಹಾಗೂ ಏಕಮತದ ಪ್ರತಿಬಿಂಬವಾಗಿದೆ. ಇಬ್ಬರು ಸದಸ್ಯರನ್ನು ಹೊರತುಪಡಿಸಿ, ಹಿಂದಿನ ಬಹುತೇಕ ಸಮಿತಿಯೇ ಮರು ಆಯ್ಕೆಯಾಗಿದೆ.
ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಗುಂಡಪ್ಪಗೌಡ, ಉಪಾಧ್ಯಕ್ಷರಾಗಿ ವೈಶ್ಯ ಬ್ಯಾಂಕ್‌ನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಬಿ.ಶಿವಲಿಂಗಪ್ಪ, ಖಜಾಂಚಿಯಾಗಿ ಹಾಲಿ ಖಜಾಂಚಿ ಶ್ರೀಶೈಲ ರಾಮಣ್ಣವರ್, ಗೌರವ ಕಾರ್ಯದರ್ಶಿಯಾಗಿ ಹಾಲಿ ಕಾರ್ಯದರ್ಶಿಯಾದ ಮಾಜಿ ಮೇಯರ್.ಪಿ.ವಿಶ್ವನಾಥ್ ಆಯ್ಕೆಯಾದರು.
ಉಳಿದಂತೆ ಆಡಳಿತ ಸಮಿತಿಗೆ ಸಿ.ಎಸ್. ಚಂದ್ರಶೇಖರ್, ಅಬ್ದುಲ್ ಜಮೀಲ್, ಎಸ್.ಶಿವಲಿಂಗಯ್ಯ, ಎಂ.ಎಸ್.ಎಂ.ಶರ್ಮಾ, ಟಿ. ನಾಗರಾಜ್, ತಮ್ಮಣ್ಣ ಹಳೆ ತಂಡದ ಜತೆಗೆ ಹೊಸದಾಗಿ ಕೆ.ಎಂ.ರಾಜಶೇಖರ್, ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾದರು.