ನಾರಳಾಪುರ ಡೇರಿಗೆ ಅವಿರೋಧ ಆಯ್ಕೆ

ಪಿರಿಯಾಪಟ್ಟಣ ತಾಲೂಕಿನ ನಾರಳಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾಗ್ಯಮ್ಮ ಮತ್ತು  ಅನಿತಾ ಅವರನ್ನು ಸಂಘದ ನಿರ್ದೇಶಕರು ಅಭಿನಂದಿಸಿದರು.
ಪಿರಿಯಾಪಟ್ಟಣ ತಾಲೂಕಿನ ನಾರಳಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾಗ್ಯಮ್ಮ ಮತ್ತು ಅನಿತಾ ಅವರನ್ನು ಸಂಘದ ನಿರ್ದೇಶಕರು ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಭಾಗ್ಯಮ್ಮ ಅಧ್ಯಕ್ಷೆ, ಅನಿತಾ ಉಪಾಧ್ಯಕ್ಷೆ
ಪಿರಿಯಾಪಟ್ಟಣ: ತಾಲೂಕಿನ ನಾರಳಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಭಾಗ್ಯಮ್ಮ ಮತ್ತು ಉಪಾಧ್ಯಕ್ಷರಾಗಿ ಅನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಅನಿತಾ ನಾಮಪತ್ರ ಸಲ್ಲಿಸಿದ್ದರು. ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ತಾಲೂಕು ಅಧಿಕಾರಿ ಹಿತೇಂದ್ರ ಘೋಷಣೆ ಮಾಡಿದರು.
ಮುಖಂಡ ವಸಂತ ಕುಮಾರ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡಲು ಶ್ರಮವಹಿಸಬೇಕು. ಯಾವುದೇ ಗೊಂದಲವಿಲ್ಲದೆ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸಂಘದ ನಿರ್ದೇಶಕರಾದ ಸುಂದ್ರಮ್ಮ, ಚಂದ್ರಕಲಾ, ಪ್ರಮೀಳಾ, ನೇತ್ರಾವತಿ, ರಾಣಿ, ಲಲಿತಮ್ಮ, ಜಯಮ್ಮ, ಸುಂದ್ರಮ್ಮ, ಹೇಮಾ, ಕಾರ್ಯದರ್ಶಿ ಸವಿತಾ, ಮುಖಂಡರಾದ ಮನೋಹರ, ಜಗದೀಶ್, ಸತೀಶ್, ಲಲಿತಮ್ಮ, ಗೀತಾ, ವೃಷಭೇಂದ್ರಪ್ಪ, ಗೌರಮ್ಮ, ನಾಗರಾಜ್, ವಿಶ್ವನಾಥ್, ಮಹದೇವ್, ಮಹೇಶ್, ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net