ಬಿಳುಗಲಿ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ನಂಜನಗೂಡು ತಾಲೂಕು ಬಿಳುಗಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿ.ಸಿ.ಪುರುಷೋತ್ತಮ್,  ಜಿ.ಸಿ.ಶಿವಪ್ರಸಾದ್ ಅವರೊಂದಿಗೆ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ, ಶಿವಕುಮಾರ್, ಮಹೇಶ್, ನಾಗರಾಜು ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಿ.ಸಿ.ಪುರುಷೋತ್ತಮ್ ಅಧ್ಯಕ್ಷ, ಜಿ.ಸಿ.ಶಿವಪ್ರಸಾದ್ ಉಪಾಧ್ಯಕ್ಷ
ಕಲ್ಕುಂದ: ನಂಜನಗೂಡು ತಾಲೂಕು ಬಿಳುಗಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಳುಗಲಿ ಗ್ರಾಮದ ಬಿ.ಸಿ.ಪುರುಷೋತ್ತಮ್, ಉಪಾಧ್ಯಕ್ಷರಾಗಿ ಜಿ.ಸಿ.ಶಿವಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಬಿ.ಸಿ.ಪುರುಷೋತ್ತಮ್ ಮಾತನಾಡಿ, ಸರ್ಕಾರದಿಂದ ಸಿಗುವ ಎಲ್ಲ ಸಾಲ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಶ್ರಮಿಸಲಾಗುವುದು. ಎಲ್ಲ ಸದಸ್ಯರು ಸಾಲ ಪಡೆದು ಮರು ಪಾವತಿ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವುದರ ಜತೆಗೆ ಸಂಘದ ಏಳಿಗೆಗೆ ಕಾರಣಗಬೇಕು ಎಂದರು.
ನೂತನ ನಿರ್ದೇಶಕರಾದ ಜಿ ಎಸ್.ಗುರುಸ್ವಾಮಿ, ಶಿವಕುಮಾರ್, ಮಹೇಶ್, ನಾಗರಾಜು, ಎಂ.ರವಿಕುಮಾರ್, ಸೋಮನಾಯಕ, ಮಂಜು, ಗೀತಾ, ಜೀಮರಹಳ್ಳಿ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸಿ.ರವಿ, ಮಹಾದೇವಯ್ಯ, ಮುಖಂಡರಾದ ಸುತ್ತೂರು ರವಿ, ಹೊಸಕೋಟೆ ಸಹಕಾರ ಸಂಘದ ಸುಂದರಸ್ವಾಮಿ, ಜಿ.ಬಿ.ಮಂಜುನಾಥ ನಾಗಯ್ಯ, ಕಾಳಶೆಟ್ಟಿ, ಶಿವಶಂಕರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net