ಪ್ರಕರಣದ ಹಿನ್ನೆಲೆ: ಗೌರಮ್ಮಳಿಗೆ ಮೂವರು ಮಕ್ಕಳಿದ್ದು, ಪ್ರತ್ಯೇಕವಾಗಿ ವಾಸವಿದ್ದರು. ವೀರಭದ್ರ ಗೌರಮ್ಮಗೆ ತೀರ ಪರಿಚಿತನಾಗಿದ್ದು, ಬಹಳ ವಿಶ್ವಾಸ ಗಳಿಸಿದ್ದ. ಬ್ಯಾಂಕ್ ವ್ಯವಹಾರ, ಇತರ ಸಹಾಯಕ್ಕಾಗಿ ಗೌರಮ್ಮ ವೀರಭದ್ರನನ್ನು ಅವಲಂಬಿಸಿದ್ದರು. ಹದಿನೈದು ದಿನಗಳ ಹಿಂದೆ ಗೌರಮ್ಮ ವೀರಭದ್ರನ ಜತೆ ಬ್ಯಾಂಕ್ ಹೋಗಿ 75 ಸಾವಿರ ರೂ. ಡ್ರಾ ಮಾಡಿದ್ದರು. ಬಳಿಕ ತುರ್ತಾಗಿ ಹಣ ಬೇಕು, ವಾರದ ನಂತರ ಮರಳಿ ಕೊಡುವುದಾಗಿ ಗೌರಮ್ಮ ಬಳಿ ಇದ್ದ 75 ಸಾವಿರ ರೂ.ಗಳನ್ನು ವೀರಭದ್ರ ಪಡೆದುಕೊಂಡಿದ್ದ.