ಮೈಸೂರಿನ ನ್ಯಾಯಾಲಯಕ್ಕೆ ವಿಶ್ವಸಂಸ್ಥೆ ನ್ಯಾಯಮೂರ್ತಿ ತಂಡ ಭೇಟಿ

ಮೈಸೂರಿನ ನ್ಯಾಯಾಲಯಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದ ನಿಯೋಗ ಬುಧವಾರ ಭೇಟಿ ನೀಡಿತ್ತು. ಲಿಯೊನಾರ್ಡೊ ನೆಮರ್ ಕಾಲೇರಾ ಬ್ರಾಂಟ್, ಜಾಯ್ಸ ಕೋಸ್ಟಾ, ಉಷಾರಾಣಿ,  ನಾಗರಾಜ ಸಿದ್ದಪ್ಪ ಅಂಕಸದೊಡ್ಡ, ಎಸ್.ಲೋಕೇಶ್ ಇತರರಿದ್ದರು.
ಮೈಸೂರಿನ ನ್ಯಾಯಾಲಯಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದ ನಿಯೋಗ ಬುಧವಾರ ಭೇಟಿ ನೀಡಿತ್ತು. ಲಿಯೊನಾರ್ಡೊ ನೆಮರ್ ಕಾಲೇರಾ ಬ್ರಾಂಟ್, ಜಾಯ್ಸ ಕೋಸ್ಟಾ, ಉಷಾರಾಣಿ, ನಾಗರಾಜ ಸಿದ್ದಪ್ಪ ಅಂಕಸದೊಡ್ಡ, ಎಸ್.ಲೋಕೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ನ್ಯಾಯಾಂಗ ವ್ಯವಸ್ಥೆ, ಕಾರ್ಯ ವಿಧಾನದ ಮಾಹಿತಿ ಪಡೆದ ನಿಯೋಗ
  • ಸಾಂಸ್ಕೃತಿಕ ನಗರಿ ಮೈಸೂರಿನ ಪರಂಪರೆ, ಸಂಸ್ಕೃತಿ, ಕಲೆಯ ಕುರಿತು ಮೆಚ್ಚುಗೆ
ಮೈಸೂರು:ನಗರದ ನ್ಯಾಯಾಲಯಕ್ಕೆ ವಿಶ್ವಸಂಸ್ಥೆಯ ಪ್ರಧಾನ ನ್ಯಾಯಾಂಗ ಅಂಗವಾದ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿ ಲಿಯೊನಾರ್ಡೊ ನೆಮರ್ ಕಾಲೇರಾ ಬ್ರಾಂಟ್ ಅವರ ನೇತೃತ್ವದ ನಿಯೋಗ ಬುಧವಾರ ಭೇಟಿ ನೀಡಿತ್ತು.
ಲಿಯೊನಾರ್ಡೊ ಜತೆಗೆ ಅವರ ಪತ್ನಿ ನ್ಯಾಯಮೂರ್ತಿ ಜಾಯ್ಸ ಕೋಸ್ಟಾ, ಅಂತಾರಾಷ್ಟ್ರೀಯ ನ್ಯಾಯಾಲಯದ ಹಿರಿಯ ಅಧಿಕಾರಿಗಳಿದ್ದ್ದ ನಿಯೋಗ, ನಗರದ ಲಾ ಕೋರ್ಟ್ ಸಂಕೀರ್ಣ, ಮಳಲವಾಡಿ (ಜಯನಗರ) ನ್ಯಾಯಾಲಯದ ಸಂಕೀರ್ಣ ಸೇರಿದಂತೆ ವಿವಿಧೆಡೆ ಭೇಟಿ ನೀಡಿತ್ತು.
ಲಿಯೊನಾರ್ಡೊ ನೆಮರ್ ಕಾಲೇರಾ ಬ್ರಾಂಟ್ ಅವರು, ಭಾರತದ ನ್ಯಾಯಾಂಗ ವ್ಯವಸ್ಥೆ, ಕಾರ್ಯ ವಿಧಾನ ಕುರಿತು ಮಾಹಿತಿ ಪಡೆದರು. ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯವಸ್ಥೆ ಬಗ್ಗೆ ಮಾಹಿತಿ ಹಂಚಿಕೊಂಡರು. ಸಾಂಸ್ಕೃತಿಕ ನಗರಿ ಮೈಸೂರಿನ ಪರಂಪರೆ, ಸಂಸ್ಕೃತಿ, ಕಲೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡ ಇನ್ನಿತರ ನ್ಯಾಯಾಧೀಶರು, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net