ಯುಜಿಡಿ ಪೈಪ್‌ಲೈನ್ ಒಡೆದು ನಿವಾಸಿಗಳಿಗೆ ತೊಂದರೆ

ವಿಜಯನಗರ ಮೊದಲನೇ ಹಂತದಲ್ಲಿ ಯುಜಿಡಿ ಪೈಪ್‌ಲೈನ್ ಒಡೆದು ನಿವಾಸಿಗಳು ತೊಂದರೆಗೀಡಾಗಿದ್ದಾರೆ.
ವಿಜಯನಗರ ಮೊದಲನೇ ಹಂತದಲ್ಲಿ ಯುಜಿಡಿ ಪೈಪ್‌ಲೈನ್ ಒಡೆದು ನಿವಾಸಿಗಳು ತೊಂದರೆಗೀಡಾಗಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮನೆಗಳಲ್ಲಿ ವಾಸಿಸುವ ಜನತೆಯ ವೇದನೆ
  • ದುರ್ವಾಸನೆಯಲ್ಲಿಯೇ ವಿದ್ಯಾರ್ಥಿಗಳ ಆಟ
  • ದೂರು ನೀಡಿದರೂ ಸಂಬಂಧಿಸಿದವರಿಂದ ಪ್ರತಿಕ್ರಿಯೆ ಇಲ್ಲ
ಮೈಸೂರು: ವಿಜಯನಗರ ಮೊದಲನೇ ಹಂತದ, 2ನೇ ಕ್ರಾಸ್, 10ನೇ ಮುಖ್ಯರಸ್ತೆಯಲ್ಲಿ ಇರುವ ಯುಜಿಡಿ ಪೈಪ್‌ಲೈನ್ ಒಡೆದು ಹೋಗಿ ಬಹಳ ದಿನಗಳು ಕಳೆದಿದ್ದರೂ ದುರಸ್ತಿ ಕಾರ್ಯ ನೆರವೇರಿಲ್ಲ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. 
ಈ ರಸ್ತೆಯಲ್ಲಿ ಸಂಚರಿಸುವವರು, ಅಕ್ಕಪಕ್ಕದಲ್ಲಿ ಇರುವ ಮನೆಗಳಲ್ಲಿ ವಾಸಿಸುವ ಜನತೆಯ ವೇದನೆ ಹೇಳತೀರದಾಗಿದೆ. ಯುಜಿಡಿ ಪೈಪ್‌ಲೈನ್ ಹಾದುಹೋಗಿರುವ ಪಕ್ಕದಲ್ಲಿ ಭಾರತೀಯ ವಿದ್ಯಾಭವನದ ಶಾಲೆ ಇದ್ದು, ಆಟದ ಮೈದಾನವೂ ಇದೆ. ವಿದ್ಯಾರ್ಥಿಗಳು ಈ ದುರ್ವಾಸನೆಯಲ್ಲಿಯೇ ಆಟವಾಡಬೇಕಾದ ಸ್ಥಿತಿ ಉಂಟಾಗಿದೆ. ಇದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದರು. 
ನಗರಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದೆ ಇರುವುದರಿಂದ ಯಾರಿಗೆ ಸಮಸ್ಯೆ ಹೇಳಬೇಕು ಎಂದು ಸಾಮಾನ್ಯ ಜನರು ಪರಿತಪಿಸುವಂತಾಗಿದೆ. ಆದ್ದರಿಂದ ಆದಷ್ಟು ಬೇಗ ನಗರಪಾಲಿಕೆಯ ಆಯುಕ್ತ, ಈ ಯುಜಿಡಿ ಪೈಪ್‌ಲೈನ್ ದುರಸ್ತಿಪಡಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮಕೈಗೊಳ್ಳಬೇಕು ಎಂದು ಬೆಸಗರಹಳ್ಳಿ ರವಿಪ್ರಸಾದ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net