ಮೈಸೂರು ಕಾರಾಗೃಹದಲ್ಲಿ ಕೈದಿಗೆ ಸಿಮ್‌ಕಾರ್ಡ್ ನೀಡಲು ಯತ್ನ : ಇಬ್ಬರು ಮಹಿಳೆಯರು ಪೊಲೀಸರ ವಶಕ್ಕೆ

ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹ
ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹ
Published on
ಮೈಸೂರು: ನಗರದ ಜಿಲ್ಲಾ ಕೇಂದ್ರ ಕಾರಾಗೃಹದೊಳಗೆ 2 ಸಿಮ್‌ಕಾರ್ಡ್‌ಅನ್ನು ಅಕ್ರಮವಾಗಿ ಕೊಂಡೊಯ್ಯಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ಕಾರಾಗೃಹ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ವಿಚಾರಣಾಧೀನ ಕೈದಿ ಮಹಮ್ಮದ್ ರಿಹಾನ್‌ನನ್ನು ಭೇಟಿಯಾಗಲು ನಸೀನ್ ತಾಜ್ ಹಾಗೂ ಫಾರ್ಹಿನ್ ತಾಜ್ ಎಂಬವರು ಸಂದರ್ಶಕರಾಗಿ ಮೇ 27 ರಂದು ಆಗಮಿಸಿದ್ದರು. ಈ ಸಂದರ್ಭ ಕಾರಾಗೃಹದ ತಪಾಸಣಾ ಕೊಠಡಿಯಲ್ಲಿ ತಪಾಸಣೆ ನಡೆಸಿದಾಗ ಕೈದಿಗೆ ನೀಡಲು ತಂದಿದ್ದ ಜೀನ್ಸ್ ಪ್ಯಾಂಟ್‌ನಲ್ಲಿ 2 ಸಿಮ್‌ಕಾರ್ಡ್ ಇರುವುದು ಕಂಡು ಬಂತು. ತಕ್ಷಣ ಇಬ್ಬರು ಆರೋಪಿಗಳನ್ನು ಕಾರಾಗೃಹ ಸಿಬ್ಬಂದಿ ವಶಕ್ಕೆ ಪಡೆದು ಮಂಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net