ರಾಜಯೋಗ ಶಿಕ್ಷಕಿಯರಿಗೆ ತರಬೇತಿ ಕಾರ್ಯಾಗಾರ

ಲಿಂಗದೇವರಕೊಪ್ಪಲಿನ ರಾಜಯೋಗ ರಿಟ್ರೀಟ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಉದ್ಘಾಟನೆಯಲ್ಲಿ ಬಿ.ಕೆ.ಲಕ್ಷ್ಮೀಜಿಮ, ಬಿ.ಕೆ.ರಂಗನಾಥ್, ಡಾ.ಸಚಿನ್‌ಪರಬ್ , ಬಿ.ಕೆ. ಶಾರದಾಜೀ, ಬಿ.ಕೆ. ಪ್ರಭಾಮಣೀಜೀ, ಬಿ.ಕೆ. ದಾನೇಶ್ವರೀಜೀ ಇದ್ದರು.
ಲಿಂಗದೇವರಕೊಪ್ಪಲಿನ ರಾಜಯೋಗ ರಿಟ್ರೀಟ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಉದ್ಘಾಟನೆಯಲ್ಲಿ ಬಿ.ಕೆ.ಲಕ್ಷ್ಮೀಜಿಮ, ಬಿ.ಕೆ.ರಂಗನಾಥ್, ಡಾ.ಸಚಿನ್‌ಪರಬ್ , ಬಿ.ಕೆ. ಶಾರದಾಜೀ, ಬಿ.ಕೆ. ಪ್ರಭಾಮಣೀಜೀ, ಬಿ.ಕೆ. ದಾನೇಶ್ವರೀಜೀ ಇದ್ದರು.
Published on
ಮೈಸೂರು: ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಲಿಂಗದೇವರಕೊಪ್ಪಲಿನ ರಾಜಯೋಗ ರಿಟ್ರೀಟ್ ಸೆಂಟರ್‌ನಲ್ಲಿ ರಾಜಯೋಗ ಶಿಕ್ಷಕಿಯರಿಗೆ ಎರಡು ದಿನದ ನಶಾ ಮುಕ್ತ ಭಾರತ ಅಭಿಯಾನ ಹಾಗೂ ಭಾವನಾತ್ಮಕ ಆರೋಗ್ಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಮಾಲೋಚಕ ಮತ್ತು ಕಾರ್ಪೂರೇಟ್ ತರಬೇತುದಾರ ಮುಂಬಯಿನ ಡಾ.ಸಚಿನ್‌ಪರಬ್ ಉದ್ಘಾಟಿಸಿ, ಇಂದಿನ ದಿನಮಾನಸದಲ್ಲಿ ಮಕ್ಕಳು ಮತ್ತು ಯುವಕರಲ್ಲಿ ಕಾಣಬರುತ್ತಿರುವ ದುರಭ್ಯಾಸಗಳು ಹಾಗೂ ತುಂಬಾಕು ಸೇವನೆಯಿಂದ ಉಂಟಾಗುವ ಪರಿಣಾಮದ ಕುರಿತು ತಿಳಿಸಿಕೊಟ್ಟರು.
ಮಾದಕ ದ್ರವ್ಯಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಕಾರಣಗಳಿಂದಾಗಿ ಅಭ್ಯಾಸ ಮಾಡಿಕೊಂಡು ಅದರಿಂದ ಹೊರಬರಲಾರದೇ ವಿವಿಧ ದುಷ್ಪರಿಣಾಗಳನ್ನು ಎದುರಿಸುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಈ ಬಗ್ಗೆ ಸೂಕ್ತ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದೊಡನೆ ಒಡಂಬಡಿಕೆಯೊಂದನ್ನು ಈಶ್ವರೀಯ ವಿಶ್ವ ವಿದ್ಯಾಲಯ ಮಾಡಿಕೊಂಡಿದೆ ಎಂದರು. 
ಕೇಂದ್ರ ಸರ್ಕಾರದ ನಶಾಮುಕ್ತ ಅಭಿಯಾನ ಎಂಬ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಯುವ ಜನಾಂಗವನ್ನು ದುಶ್ಚಟಗಳಿಂದ ದೂರ ಮಾಡಲು, ಜಾಗೃತಗೊಳಿಸುವ ತರಬೇತಿಯನ್ನು ನೀಡಿ ಬ್ರಹ್ಮಕುಮಾರಿ ಸಹೋದರಿಯರು ಮಕ್ಕಳನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತತ್ಪರರಾಗಬೇಕು ಎಂದು ಹೇಳಿದರು.
ಮೈಸೂರು ಉಪವಿಭಾಗದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಲಕ್ಷ್ಮಿಜೀ, ಪ್ರಾಂಶುಪಾಲ ಬಿ.ಕೆ. ರಂಗನಾಥ್ ಶಾಸ್ತ್ರೀಜಿ, ಬಿ.ಕೆ. ಶಾರದಾಜೀ, ಮಾನಸ ಪ್ರಶಸ್ತಿ ಪುರಸ್ಕೃತೆ ಬಿ.ಕೆ. ಪ್ರಭಾಮಣೀಜೀ, ಮನೋಬಲ ತರಬೇತುದಾರೆ ಬಿ.ಕೆ. ದಾನೇಶ್ವರೀಜೀ, ವಿವಿಧ ತಾಲೂಕು ರಾಜಯೋಗ ಸೇವಾಕೇಂದ್ರಗಳ ರಾಜಯೋಗ ಶಿಕ್ಷಕಿಯರು, ಬಿ.ಕೆ.ಆರಾಧ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net