ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲಾ ಶಿಕ್ಷಣ ಉಪಯೋಜನಾ ಸಮನ್ವಯಾಧಿಕಾರಿ ಡಾ. ಎಸ್. ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಮಾಜ ಒಪ್ಪುವಂತಹ ನೈತಿಕ ನಿಲುವುಗಳನ್ನು ಬೆಳೆಸುವುದು ಶಿಕ್ಷಕರ ಕರ್ತವ್ಯ. ಪ್ರಾಮಾಣಿಕತೆ, ಸಹಾನುಭೂತಿ, ಕರುಣೆ, ಸಹನಶೀಲತೆ, ಭಾವನಾತ್ಮಕತೆ ಮೊದಲಾದ ನೈತಿಕ ಅಂಶಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.