ಮೈಸೂರು ಟರ್ಮಿನಲ್ ಬೈಪಾಸ್ ನಡುವೆ ರಸ್ತೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಈ ಕ್ರಮ
ಮಾ.21ಮತ್ತು 24ರಂದು ಭಾಗಶಃ ರದ್ದುಪಡಿಸಲಾಗಿದ್ದ ರೈಲುಗಳು ವೇಳಾಪಟ್ಟಿಯಂತೆ ಸಂಚಾರ
ಮೈಸೂರು: ಮೈಸೂರು ಮತ್ತು ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಬೈಪಾಸ್ ನಡುವೆ ರಸ್ತೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಕೆಲ ರೈಲು ಸೇವೆಗಳ ಮರು ಆರಂಭ ಹಾಗೂ ಭಾಗಶಃ ರದ್ದುಪಡಿಸಿದೆ.
ಮಾ.21ಮತ್ತು 24ರಂದು ಭಾಗಶಃ ರದ್ದುಪಡಿಸಲಾಗಿದ್ದ ಕೆಳಗಿನ ರೈಲುಗಳು ಈಗ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.
ಬೆಳಗೊಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗಿದ್ದ ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲು(56267) ಮರು ಆರಂಭವಾಗಿದ್ದು, ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ. ಅಂತೆಯೇ ಮೈಸೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್(16225) ರೈಲು ಮರು ಆರಂಭವಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.
ಮಾ.28 ಮತ್ತು 31ರಂದು ಭಾಗಶಃ ರದ್ದು
ರಸ್ತೆ ಕೆಳ ಸೇತುವೆ ಕಾಮಗಾರಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೆಳಗಿನ ರೈಲುಗಳನ್ನು ಮಾ.28 ಮತ್ತು 31ರಂದು ಭಾಗಶಃ ರದ್ದುಪಡಿಸಲಾಗಿದೆ.
ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲು (56267) ಬೆಳಗೊಳ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತಿದ್ದು ಬೆಳಗೊಳದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್(16225) ರೈಲು ಸಹ ಮೈಸೂರು ಮತ್ತು ಬೆಳಗೊಳ ನಡುವೆ ಭಾಗಶಃ ರದ್ದುಪಡಿಸಲಾಗುತ್ತಿದ್ದು, ಮೈಸೂರು ಬದಲಿಗೆ ಬೆಳಗೊಳದಿಂದ ತನ್ನ ಪ್ರಯಾಣ ಆರಂಭಿಸಲಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.