ಅಬಕಾರಿ ಇಲಾಖೆಯಿಂದ ಸಿ.ಎಲ್-7, ಸಿ.ಎಲ್-2, ಸಿ.ಎಲ್-5 ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುವುದು, ಜತೆಗೆ, ಪರವಾನಗಿ ಪಡೆದ ರೀತಿ ಕಾರ್ಯನಿರ್ವಹಿಸದೇ ಇರುವ ಬಾರ್, ಪಬ್‌ಗಳು ಮೈಸೂರು ನಗರ ಹಾಗೂ ನಗರದ ಹೊರ ವಲಯದಲ್ಲಿ ನಡೆಯುತ್ತಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ತಪಾಸಣೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದರು.