53 ಹಿರಿಯ ಕ್ರೀಡಾಪಟುಗಳಿಗೆ ಟ್ರಾೃಕ್ ಸೂಟ್ ವಿತರಣೆ

ಕೋಲಾರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳಿಗೆ ಟ್ರಾೃಕ್ ಸೂಟ್ ವಿತರಣೆ ಮಾಡಲಾಯಿತು. ಅಂಶಿ ಪ್ರಸನ್ನಕುಮಾರ್, ಬಿ.ಬಸವರಾಜು, ಎಂ.ಯೋಗೇಂದ್ರ ಇದ್ದರು.
ಕೋಲಾರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳಿಗೆ ಟ್ರಾೃಕ್ ಸೂಟ್ ವಿತರಣೆ ಮಾಡಲಾಯಿತು. ಅಂಶಿ ಪ್ರಸನ್ನಕುಮಾರ್, ಬಿ.ಬಸವರಾಜು, ಎಂ.ಯೋಗೇಂದ್ರ ಇದ್ದರು.
Published on
ಮೈಸೂರು: ಕೋಲಾರದಲ್ಲಿ ಇದೇ ತಿಂಗಳು ನಡೆಯುವ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ತೆರಳುತ್ತಿರುವ ನಗರದ 53 ಮಂದಿ ಹಿರಿಯ ಕ್ರೀಡಾಪಟುಗಳಿಗೆ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಟ್ರಾೃಕ್ ಸೂಟ್ ವಿತರಿಸಲಾಯಿತು.
ನಗರದ ಅಶೋಕಪುರಂ ರೈಲು ನಿಲ್ದಾಣದ ಬಳಿ ಇರುವ ಆರ್‌ಎನ್‌ಎಂ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿತರಿಸಲಾಯಿತು.
ಕಾರ್ಯದರ್ಶಿ ಬಿ.ಬಸವರಾಜು ಮಾತನಾಡಿ, ಮೈಸೂರು ತಂಡವು ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ ಆಗಬೇಕು ಎಂದು ಆಶಿಸಿದರು.
ಸಂಸ್ಥೆಯ ಅಧ್ಯಕ್ಷೆ ಸುಮನಾ ನರಸಿಂಹಮೂರ್ತಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಭಾಗವಹಿಸಿದ್ದರು. ಟ್ರಾೃಕ್ ಸೂಟ್ ಪ್ರಾಯೋಜಿಸಿದ ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಯೋಗೇಂದ್ರ, ಪಾರ್ವತಿ ಕಾಂತರಾಜು, ಸಿ.ಚನ್ನಯ್ಯ ಅವರನ್ನು ಸನ್ಮಾನಿಸಲಾಯಿತು.
ಖಜಾಂಚಿ ಕೆ.ಎನ್.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಎಂ.ಪಿ.ಚಂದ್ರಶೇಖರ್, ಹಿರಿಯ ಅಥ್ಲೆಟ್ ಪಿ.ಜಿ.ಸೋಮಶೇಖರ್‌ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net