ಪ್ರಮುಖ ಮುಖ್ಯಾಂಶಗಳು.ಗಂಭೀರವಾಗಿ ಗಾಯಗೊಂಡ ಇವರು ಸ್ಥಳದಲ್ಲೇ ಕೊನೆಯುಸಿರುಸವಾರ ಸ್ವಗ್ರಾಮ ಹಿರಿಕಾಟಿ ಗ್ರಾಮಕ್ಕೆ ವಾಪಸ್ ಆಗುವ ಸಂದರ್ಭದಲ್ಲಿ ಘಟನೆ.ಮೈಸೂರು: ನಂಜನಗೂಡು ರಸ್ತೆಯಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ. .ವಿಜಯನಗರದ ನಿವಾಸಿ ಗೋಪಾಲ್ (56) ಮೃತ ಸವಾರ. ಇವರು ಸ್ವಗ್ರಾಮ ಹಿರಿಕಾಟಿ ಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದರು. .ಈ ಸಂದರ್ಭದಲ್ಲಿ ನಂಜನಗೂಡು ರಸ್ತೆಯ ರುಚಿ ಹೋಟೆಲ್ ಎದುರು ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಇವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. .ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ದಕ್ಷಿಣ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.