ಸರಗೂರು ತಾಲೂಕಿನ ಕೊತ್ತೇಗಾಲ ಗ್ರಾಮದ ಜಮೀನಿನಲ್ಲಿ ಹುಲಿ ಸೆರೆಗೆ ಇರಿಸಲಾಗಿದ್ದ ಬೋನನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಪರಿಶೀಲನೆ ನಡೆಸಿದರು. ಬಂಡೀಪುರ ಹುಲಿ ಸಂರಕ್ಷಣ ಪ್ರದೇಶದ ನಿರ್ದೇಶಕ ಶುಭಂ, ಮೈಸೂರಿನ ಡಿಸಿಎಫ್ ಕೆ.ಪರಮೇಶ್, ಎಸಿಎಫ್ ಸುಮಿತ್ರಾ, ಆರ್‌ಎಫ್‌ಒ ರಾಮಾಂಜನಯ್ಯ, ಲೋಕೇಶ್ ಇತರರು ಇದ್ದರು.
ಸರಗೂರು: ತಾಲೂಕಿನ ಕೊತ್ತೇಗಾಲ ಹಾಗೂ ಜಯನಗರ ಗ್ರಾಮದ ಸುತ್ತಮುತ್ತ ಆತಂಕ ಸೃಷ್ಟಿಸಿದ್ದ ಹುಲಿ ಸೆರೆಗೆ ಬೋನು ಅಳಡಿಸಿದ್ದ ಸ್ಥಳಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊತ್ತೇಗಾಲ ಗ್ರಾಮದಲ್ಲಿ ಇತ್ತೀಚೆಗೆ ಹಸು ಬಲಿ ಪಡೆದ ಬೆನ್ನಲ್ಲೇ ಹುಲಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಅಳವಡಿಸಿದ್ದರು. ಆದರೂ ಹುಲಿ ಸೆರೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಕೊತ್ತೇಗಾಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಹುಲಿ ಚಲನವಲನದ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಒಂದು ವಾರದಲ್ಲಿ ಹುಲಿ ಬೋನಿಗೆ ಬೀಳದಿದ್ದರೆ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಬಂಡೀಪುರ ಹುಲಿ ಸಂರಕ್ಷಣ ಪ್ರದೇಶದ ನಿರ್ದೇಶಕ ಶುಭಂ, ಮೈಸೂರಿನ ಡಿಸಿಎಫ್ ಕೆ.ಪರಮೇಶ್, ಎಸಿಎಫ್ ಸುಮಿತ್ರಾ, ಆರ್‌ಎಫ್‌ಒ ರಾಮಾಂಜನಯ್ಯ, ಲೋಕೇಶ್ ಇತರರು ಇದ್ದರು.