ಮೈಸೂರು:ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಅಪರಾಧಿಗಳಿಗೆ 12 ವರ್ಷ ಕಠಿಣ ಸಜೆ, ಒಟ್ಟು 1.25 ಲಕ್ಷ ರೂ. ದಂಡ ವಿಧಿಸಲಾಗಿದೆ.
ನಗರದ ವಿವಿಧ ಬಡಾವಣೆಯ ನಿವಾಸಿಗಳಾದ ಜಾವೀದ್ ಅಹಮದ್, ಸೈಯದ್ ಮುಹಮದ್ ನೂರುಲ್ಲಾ ಅಲಿಯಾಸ್ ಪಾರಿವಾಳ ಮತ್ತು ಸದ್ದಾಂ ಹುಸೇನ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಮಾದಕ ವಸ್ತುವಾದ ಎಂಡಿಎನ್‌ಅನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ 2024ರಲ್ಲಿ ನಗರ ಅಪರಾಧ ಪತ್ತೆ ದಳ ಪೊಲೀಸರು ದಾಳಿ ನಡೆಸಿ ಇವರನ್ನು ಬಂಧಿಸಿದ್ದರು.
ಜಾವೀದ್ ಅಹಮದ್, ಸೈಯದ್ ಮುಹಮದ್ ನೂರುಲ್ಲಾ ಮತ್ತು ಸದ್ದಾಂ ಹುಸೇನ್‌ನನ್ನು ವಶಕ್ಕೆ ಪಡೆದು ಅವರಿಂದ 51 ಗ್ರಾಂ ಎಂಡಿಎನ್, ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದರು. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು, ಮೂವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಅಭಿಯೋಜಕರಾದ ವಿಜಯಲಕ್ಷ್ಮೀ ವಾದ ಮಂಡಿಸಿದ್ದರು. ಮಾದಕ ವಸ್ತುಗಳ ವಿರುದ್ಧ ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಮಾದಕ ಜಾಲದಲ್ಲಿ ಸಿಕ್ಕಿ ಬಿದ್ದವರಿಗೆ ಕಠಿಣ ಶಿಕ್ಷೆ ಅಗಲಿದೆ ಎನ್ನುವುದಕ್ಕೆ ಇದು ಉದಾಹಣೆ ಆಗಲಿದೆ. ಆದ್ದರಿಂದ ಯಾವುದೇ ಮಾದಕ ವಸ್ತುಗಳ ಜಾಲ ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಎಚ್ಚರಿಕೆ ನೀಡಿದ್ದಾರೆ.