ಮೇ 1ರಿಂದ ಮೂರು ದಿನ ‘ವಿಜಯವಾಣಿ’ ಕೃಷಿ ಮೇಳ

 ‘ವಿಜಯವಾಣಿ’ ವತಿಯಿಂದ ಆಯೋಜಿಸಿರುವ  ‘ಕೃಷಿ ಮೇಳ’ಕ್ಕಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶಾಮಿಯಾನ ಅಳವಡಿಕೆ ಕೆಲಸಕ್ಕೆ ಭಾನುವಾರ ಮಧ್ಯಾಹ್ನ ಭೂಮಿಪೂಜೆ ನೆರವೇರಿಸಲಾಯಿತು.
‘ವಿಜಯವಾಣಿ’ ವತಿಯಿಂದ ಆಯೋಜಿಸಿರುವ ‘ಕೃಷಿ ಮೇಳ’ಕ್ಕಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶಾಮಿಯಾನ ಅಳವಡಿಕೆ ಕೆಲಸಕ್ಕೆ ಭಾನುವಾರ ಮಧ್ಯಾಹ್ನ ಭೂಮಿಪೂಜೆ ನೆರವೇರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾರಾಜ ಕಾಲೇಜು ಮೈದಾನದಲ್ಲಿ ಶಾಮಿಯಾನ ಅಳವಡಿಕೆ ಕೆಲಸಕ್ಕೆ ಚಾಲನೆ
  • ಭೂಮಿ ಪೂಜೆ ನೆರವೇರಿಸಿ ಸಿದ್ಧತೆಗೆ ಚಾಲನೆ
ಮೈಸೂರು: ‘ಕನ್ನಡಿಗರ ಧ್ವನಿ’ ಆಗಿರುವ ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಸುಸ್ಥಿರ ಕೃಷಿ ಅಭಿವೃದ್ಧಿಗಾಗಿ ರಾಜ್ಯಮಟ್ಟದ ‘ಕೃಷಿ ಮೇಳ’ವನ್ನು ಮೇ 1ರಿಂದ 3ರ ವರೆಗೆ ಆಯೋಜಿಸಲಾಗಿದೆ
ಈ ಹಿನ್ನೆಲೆಯಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶಾಮಿಯಾನ ಅಳವಡಿಕೆ ಕೆಲಸಕ್ಕೆ ಭಾನುವಾರ ಮಧ್ಯಾಹ್ನ ಭೂಮಿಪೂಜೆ ನೆರವೇರಿಸಲಾಯಿತು.  ಇದರೊಂದಿಗೆ ಪೂರ್ವಸಿದ್ಧತಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ವಿಜಯವಾಣಿ ಪತ್ರಿಕೆಯಿಂದ ಮೈಸೂರು ನಗರದಲ್ಲಿ ಆಯೋಜನೆ ಮಾಡಿರುವ 3ನೇ ಕೃಷಿ ಮೇಳ ಇದಾಗಿದೆ. ಮೂರು ದಿನಗಳ ಕಾಲ ಕೃಷಿ ಸಂಸ್ಕೃತಿಯನ್ನು ಕಟ್ಟಿಕೊಡುವ ಈ ಮೇಳದ ದಿನಗಣನೆ ಶುರುವಾಗಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿ ಬೃಹತ್ ಮೇಳ ಏರ್ಪಡಿಸಲು ಸೂಕ್ತ ಜಾಗವಾಗಿರುವ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜು ಮೈದಾನದಲ್ಲಿ ಸಿದ್ಧತೆ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಸಾಂಗವಾಗಿ ನೆರವೇರಲು ಭೂದೇವಿಗೆ ಪೂಜೆ ಸಲ್ಲಿಸಿ ನಮಿಸಲಾಯಿತು.
ಈ ಸಂದರ್ಭದಲ್ಲಿ ವಿಜಯವಾಣಿ ಮೈಸೂರು ಬ್ಯೂರೋದ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ದಶರಥ ಹಿತ್ತಲಕೇರಿ, ಚಿರಾಗ್ ಇವೆಂಟ್ಸ್ ಸಂಸ್ಥೆಯ ಎಸ್.ವಿವೇಕಾನಂದ(ವಿವೇಕ್), ಮೈಸೂರು ವಿಜಯವಾಣಿ ಪತ್ರಿಕೆ ಡೀಲರ್ ಎಸ್.ಶಾಂತೇಶ್ ಸೇರಿದಂತೆ ಇನ್ನಿತರರಿದ್ದರು.
ಇದು ಕೃಷಿ ಮಹೋತ್ಸವದೊಂದಿಗೆ ಅವಕಾಶಗಳ ಹಬ್ಬ. ಮೆರವಣಿಗೆ, ಕೃಷಿ ಮಳಿಗೆಗಳು, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಪ್ರದರ್ಶನ, ಸಮೂಹ ನೃತ್ಯ, ಗೀತಗಾಯನ, ರಂಗೋಲಿ ಸ್ಪರ್ಧೆ, ದೇಸಿ ಆಟಗಳು, ಶ್ವಾನ ಪ್ರದರ್ಶನ ಹೀಗೆ ಚಟುವಟಿಕೆಗಳ ಒಂದೇ ಸೂರಿನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.
ಕೃಷಿ ಲೋಕದ ಆಗುಹೋಗಗಳ ಕುರಿತು ವಿಷಯ ತಜ್ಞರು, ಪರಿಣಿತರು, ರೈತರ ಮುಖಂಡರು ವಿಚಾರ ಮಂಡಿಸಲಿದ್ದಾರೆ. ಕೃಷಿರಂಗದಲ್ಲಿ ಆಗಿರುವ ಬದಲಾವಣೆಗಳು, ಬೆಳವಣಿಗೆ ಮತ್ತು ಅಭಿವೃದ್ಧಿ ಕಾರ್ಯಗಳ ಪರಿಚಯಿಸುವ ವಸ್ತುಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಕೃಷಿ ಸಂಶೋಧನೆ ಮಾದರಿಗಳು ನೋಡಲು ಲಭ್ಯ ಇರಲಿವೆ.
ರೈತರ ಬದುಕಿನೊಂದಿಗೆ ಅವಿನಾಭ ಸಂಬಂಧ ಹೊಂದಿರುವ ಕೃಷಿ ಸಂಸ್ಕೃತಿ ಕೂಡ ಅನಾವರಣಗೊಳ್ಳಲಿದೆ. ಕೃಷಿಗೆ ಸಂಬಂಧಿಸಿದ ಸಾಂಸ್ಕೃತಿಕ ಚಟುವಟಿಕೆಗಳು ಮೇಳಕ್ಕೆ ಮೆರುಗು ನೀಡಲಿವೆ. 
ಹೊಲಗದ್ದೆಗಳಲ್ಲಿ ಕಾಯಕದಲ್ಲೇ ಕಳೆದುಹೋಗಿರುವ ಕೃಷಿಕರಿಗೆ ದೇಸಿ ಕ್ರೀಡೆಗಳು ಆಯೋಜಿಸಿರುವುದು ವಿಶೇಷ ಆಕರ್ಷಣೆ. ರೈತರಿಗಾಗಿ ಒಂಟಿಗಾಲಿನ ಓಟ, ಗೊಬ್ಬರಮೂಟೆ ಹೊತ್ತು ಓಡುವ ಸ್ಪರ್ಧೆ, ಲೆಮನ್ ಆ್ಯಂಡ್ ಸ್ಪೂನ್ ಸ್ಪರ್ಧೆ ಇನ್ನಿತರ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. 
ಇದು ಕೃಷಿಕರಿಗೆ ಭರಪೂರ ಮನರಂಜನೆ ಒದಗಿಸಲಿದೆ. ಅಲ್ಲದೆ, ಕರುಗಳ ಪ್ರದರ್ಶನ, ಶ್ವಾನ ಪ್ರದರ್ಶನವೂ ಇರಲಿದೆ. ಸಾರ್ವಜನಿಕರು, ರೈತರು ಈ ಮೇಳದಲ್ಲಿ ಮುಕ್ತವಾಗಿ ಪಾಲ್ಗೊಂಡು ಕೃಷಿ ಕಲೆ, ಗ್ರಾಮ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net