ಇದರಲ್ಲಿ ಜಗತ್ತಿನ 114 ದೇಶಗಳ ಸುಮಾರು 3042 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಪಾಲ್ಗೊಳ್ಳಲಿವೆ. ಇವು ಬಹುಭಾಷೆಯಾಗಿವೆ. ಉದ್ಘಾಟನೆ ಫೆ.20ರಂದು ಬೆಳಗ್ಗೆ 10ಕ್ಕೆ ನಡೆಯಲಿದ್ದು, ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್, ನಿರ್ದೇಶಕ ಪ್ರಕಾಶ್ ಬೆಳವಾಡಿ, ಲೇಖಕ ಜೋಗಿ ಗಿರೀಶ್ ರಾವ್ ಹತ್ವಾರ್, ಡಾ.ವಿ.ನಾಗೇಂದ್ರ ಪ್ರಸಾದ್, ನಟಿ ಕಾರುಣ್ಯ ರಾಮ್‌ಗೌಡ ಹಾಗೂ ಲಾಸ್ಯಾ ನಾಗರಾಜ್ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.