ರಾಜ್ಯ ನಾಯಕರೆನಿಸಿಕೊಂಡವರು ಬೇರೆ ಕ್ಷೇತ್ರ ನೋಡಿಕೊಳ್ಳಲಿ: ಎಲ್.ನಾಗೇಂದ್ರ

ಎಲ್ ನಾಗೇಂದ್ರ
ಎಲ್ ನಾಗೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಾಪ್ ಸಿಂಹ ಅವರು ಪ್ರಚಾರಕ್ಕೆ ಬಾರದಿದ್ದರೂ ನನ್ನ ಕ್ಷೇತ್ರದಲ್ಲಿ ಯದುವೀರ್ ಅವರಿಗೆ 56,500 ಮತ ನೀಡಿದ್ದೇವೆ
  • ನನ್ನ ಬಗ್ಗೆ ಯಾವ ಆಪಾದನೆಗಳಿಲ್ಲ. ಕೋರ್ಟ್‌ನಿಂದ ನಾನು ಯಾವುದೇ ತಡೆಯಾಜ್ಞೆ ತಂದು ರಾಜಕಾರಣ ಮಾಡುತ್ತಿಲ್ಲ
ಮೈಸೂರು: ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ಸಮಯದಲ್ಲಿಯೂ ನಾನೇ ಸ್ವರ್ಧೆ ಮಾಡುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಕಡೆಗೆ ಟಿಕೆಟ್ ಯಾರಿಗೆ ಸಿಕ್ಕಿತು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ಟಿಕೆಟ್ ಯಾರಿಗೆ ನೀಡಬೇಕು ಎಂದು ಹೈಕಮಾಂಡ್ ನಿರ್ಧರಿಸಲಿದ್ದು, ಇದರ ಬಗ್ಗೆ ಪ್ರತಾಪ್ ಸಿಂಹ ಅವರಿಗೆ ಅರಿವಿರಬೇಕಿತ್ತು. ಈಗ ಯಾವ ಕಾರಣಕ್ಕೆ ಆ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದೇನೆ. ನನ್ನ ಬಗ್ಗೆ ಯಾವ ಆಪಾದನೆಗಳಿಲ್ಲ. ಕೋರ್ಟ್‌ನಿಂದ ನಾನು ಯಾವುದೇ ತಡೆಯಾಜ್ಞೆ ತಂದು ರಾಜಕಾರಣ ಮಾಡುತ್ತಿಲ್ಲ ಎಂದು ಟಾಂಗ್ ನೀಡಿದರು. 
ಕಳೆದ ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರು ಪ್ರಚಾರಕ್ಕೆ ಬಾರದಿದ್ದರೂ ನನ್ನ ಕ್ಷೇತ್ರದಲ್ಲಿ ಯದುವೀರ್ ಅವರಿಗೆ 56,500 ಮತ ನೀಡಿದ್ದೇವೆ. ಅವರು ಬೇರೆ ಊರಿನಿಂದ ಬಂದವರು, ನಾನು ಇದೇ ಊರಿನವನು, ನಾನು ಬೇರೆ ಕಡೆ ಹೋಗಲು ಆಗಲ್ಲ. ನನ್ನ ಹುಟ್ಟೂರಿನಲ್ಲೇ ನನ್ನ ಹೋರಾಟವಿದೆ. ನಾನೊಬ್ಬ ಹಿಂದೂ ಹುಲಿ ಎನ್ನುತ್ತಾರೆ, ಜತೆಗೆ ಅವರು ರಾಜ್ಯ ನಾಯಕರಾಗಿ ಬೆಳೆದಿರುವುದರಿಂದ ಬೇರೆ ಎಲ್ಲಾದರೂ ಸ್ಪರ್ಧೆ ಮಾಡಲಿ ಎಂದು ಹೇಳಿದರು. 
ಬಿಜೆಪಿಯಲ್ಲಿದ್ದು ಅವರು ಕವರ್ ಸಂಸ್ಕೃತಿ ಬಗ್ಗೆ ಮಾತನಾಡಬಾರದಿತ್ತು. ಯಾರ ಬಗ್ಗೆ  ಏಕೆ ಮಾತನಾಡಿದ್ದಾರೆ ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರ ವರ್ತನೆ ಬದಲಾಯಿಸಿಕೊಳ್ಳಲಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net