ವಿಶ್ವದ ಹಿತಕ್ಕಾಗಿ ಚಿಂತಿಸುವವರು ವಿಪ್ರರು:ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀದತ್ತ ವಿಜಯಾನಂದ ಸ್ವಾಮೀಜಿ ಅಭಿಮತ

ನಗರದ ನಾದಮಂಟಪದಲ್ಲಿ ಆಯೋಜಿಸಿದ್ದ ವಿಪ್ರ ಪ್ರೋಫೆಷನಲ್ ಫೋರಂ (ವಿಪಿಎಫ್) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಶ್ರೀದತ್ತ ವಿಜಯಾನಂದ ಸ್ವಾಮೀಜಿ, ಡಾ.ಎಸ್. ಮುರಳಿ, ಡಿ.ಶೀಹರಿ, ಸತ್ಯನಾರಾಯಣ, ಪ್ರಭಾಕರ ರಾವ್, ಎ. ಸುಧೀಂದ್ರ, ಆರ್. ಮಂಜುನಾಥ್ ಶ್ರೀವತ್ಸ, ಎಸ್.ಅಚ್ಯುತ, ಎಸ್.ಶ್ರೀನಾಥ್ ಇತರರು ಇದ್ದರು.
ನಗರದ ನಾದಮಂಟಪದಲ್ಲಿ ಆಯೋಜಿಸಿದ್ದ ವಿಪ್ರ ಪ್ರೋಫೆಷನಲ್ ಫೋರಂ (ವಿಪಿಎಫ್) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಶ್ರೀದತ್ತ ವಿಜಯಾನಂದ ಸ್ವಾಮೀಜಿ, ಡಾ.ಎಸ್. ಮುರಳಿ, ಡಿ.ಶೀಹರಿ, ಸತ್ಯನಾರಾಯಣ, ಪ್ರಭಾಕರ ರಾವ್, ಎ. ಸುಧೀಂದ್ರ, ಆರ್. ಮಂಜುನಾಥ್ ಶ್ರೀವತ್ಸ, ಎಸ್.ಅಚ್ಯುತ, ಎಸ್.ಶ್ರೀನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತ್ರಿಮತಸ್ಥ ವಿಪ್ರರೆಂಬ ವಿಭಜನೆಗಿಂತ ನಾವೆಲ್ಲರೂ ವಿಪ್ರರು ಎಂಬ ಏಕತೆಯ ಭಾವನೆ ಮುಖ್ಯ
  • ಟೀಕೆಗಳಿಗೆ ಮನಸ್ಸು ಕೊಡದೆ ವಿಪ್ರರು ಸಮುದಾಯದ ಹಿತವನ್ನು ಬಯಸುತ್ತಾ, ಎಲ್ಲ ಜನರು ಸುಭಿಕ್ಷವಾಗಿರಬೇಕು ಎಂದು ಸದಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ

ಮೈಸೂರು:

ವಿಪ್ರರು ಕೇವಲ ತಮ್ಮ ಸಮುದಾಯದ ಹಿತವನ್ನಷ್ಟೇ ಬಯಸದೆ, ಇಡೀ ವಿಶ್ವದ ಹಿತಕ್ಕಾಗಿ ಚಿಂತಿಸುವವರು ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ಸ್ವಾಮೀಜಿ ಬಣ್ಣಿಸಿದರು.

ನಗರದ ನಾದಮಂಟಪದಲ್ಲಿ ಆಯೋಜಿಸಿದ್ದ ವಿಪ್ರ ಪ್ರೋಫೆಷನಲ್ ಫೋರಂ (ವಿಪಿಎಫ್) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಪ್ರರನ್ನು ಹಲವರು ಟೀಕಿಸುತ್ತಾರೆ. ಆದರೆ ಅಂತಹ ಟೀಕೆಗಳಿಗೆ ಮನಸ್ಸು ಕೊಡದೆ ಸಮುದಾಯದ ಹಿತವನ್ನು ಬಯಸುತ್ತಾ, ಎಲ್ಲ ಜನರು ಸುಭಿಕ್ಷವಾಗಿರಬೇಕು ಎಂದು ಸದಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದರು.
ತ್ರಿಮತಸ್ಥ ವಿಪ್ರರೆಂಬ ವಿಭಜನೆಗಿಂತ ನಾವೆಲ್ಲರೂ ವಿಪ್ರರು ಎಂಬ ಏಕತೆಯ ಭಾವನೆ ಮುಖ್ಯ. ಋಗ್ವೇದ, ಯಜುರ್ವೇದ ಹಾಗೂ ಸಾಮವೇದಗಳನ್ನು ಒಟ್ಟಾಗಿ ತ್ರಯೀ ಎಂದು ಕರೆಯಲಾಗುತ್ತದೆ. ಹಾಗೆಯೇ ವಿಪ್ರ ಸಮಾಜವೂ ಭಿನ್ನ ಸಿದ್ಧಾಂತಗಳಿದ್ದರೂ ಪರಸ್ಪರ ಗೌರವ ಹಾಗೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವಿಪ್ರರು ಒಗ್ಗಟ್ಟಾಗುವುದಿಲ್ಲ ಎಂಬ ಮಾತು ಇನ್ನು ಹಳೆಯದು. ಮೈಸೂರಿನ ನಾದಮಂಟಪದಲ್ಲಿ ಇಂದು ಇಷ್ಟೊಂದು ಸಂಖ್ಯೆಯಲ್ಲಿ ವಿಪ್ರರು ಒಂದಾಗಿ ಸೇರಿರುವುದು ಆ ಮಾತು ಸುಳ್ಳು ಎಂಬುದನ್ನು ಸಾಬೀತುಪಡಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವೇದಗಳಲ್ಲಿ ವಿಪ್ರರ ಮಹತ್ವವನ್ನು ವಿಶೇಷವಾಗಿ ಪ್ರತಿಪಾದಿಸಲಾಗಿದೆ. ಅದೇ ಆಶಯವನ್ನು ಇಂದಿನ ದಿನಗಳಲ್ಲಿ ವಿಪ್ರ ಪ್ರೊಫೆಷನಲ್ ಫೋರಂ (ವಿಪಿಎಫ್) ಮೂಲಕ ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ಇದು ಕೇವಲ ಸಂಘಟನೆಯಾಗದೆ. ಸಮುದಾಯದ ಯಾವುದೇ ಸದಸ್ಯರು ಸಂಕಷ್ಟದಲ್ಲಿದ್ದಾಗ ಅವರು ಕರೆ ಮಾಡುವವರೆಗೆ ಕಾಯದೆ, ಅವರ ಅಗತ್ಯವನ್ನು ಅರಿತು ಸಹಾಯಹಸ್ತ ಚಾಚುವುದು ವಿಪ್ರ ಸಮಾಜದ ಜವಾಬ್ದಾರಿ ಎಂದರು.
ಸಮುದಾಯವನ್ನು ವಿಭಜಿಸುವ ರಾಜಕೀಯಕ್ಕೆ ನಾವು ಬಲಿಯಾಗಬಾರದು. ನಮ್ಮ ನಮ್ಮ ಆಚಾರ್ಯರ ಬಗ್ಗೆ ಭಕ್ತಿ ಇರಲಿ. ಆದರೆ ಮತ್ತೊಬ್ಬರ ಆಚಾರ್ಯರ ಬಗ್ಗೆಯೂ ಅಷ್ಟೇ ಗೌರವ ಇರಲಿ ಎಂದು ಅವರು ಹೇಳಿದರು.
ನೂತನ ಪದಾಧಿಕಾರಿಗಳಾಗಿ ಡಾ.ಎಸ್.ಮುರಳಿ, ಡಿ.ಶೀಹರಿ, ಸತ್ಯನಾರಾಯಣ, ಪ್ರಭಾಕರ ರಾವ್, ಎ.ಸುಧೀಂದ್ರ, ಆರ್. ಮಂಜುನಾಥ್ ಶ್ರೀವತ್ಸ, ಎಸ್.ಅಚ್ಯುತ, ಎಸ್.ಶ್ರೀನಾಥ್ ಇತರರು ಪದವಿ ಸ್ವೀಕರಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಅನುಪಮಾ ಬಿ.ಪಂಡಿತ್, ಶಶಿಶೇಖರ ದೀಕ್ಷಿತ್, ವಸಿಷ್ಠ ಸಿಂಹ , ನಾರಾಯಣ ಕೆ.ಭಟ್, ಆರ್.ಎಸ್.ವಿದ್ವಾನ್‌ನಂದಕುಮಾರ್, ಕುಂದೂರು ಉಮೇಶ್ ಭಟ್, ನಿತಿನ್ ರಾಜಾರಾಮ್ ಶಾಸ್ತ್ರಿ, ಪಂಡಿತ್ ಅನಿರುದ್ದಾಚಾರ್ಯ ಪಾಂಡುರಂಗಿ, ಕೆ. ಎಲ್.ಶಂಕರ ನಾರಾಯಣ ಜೋಯಿಸ್, ವಿದುಷಿ ಕೃಪಾ ಫಡ್ಕೆ, ಎನ್.ಚಂದ್ರಶೇಖರ್, ತ್ರಿವಿಕ್ರಮ್ ನಾಗೇಶ್, ಶೆಲ್ವಪಿಳ್ಳೈ ಅಯ್ಯಂಗಾರ್, ಎಚ್.ರಾಮಚಂದ್ರ, ಎ.ಪಿ.ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net