ಆಧುನಿಕ ಮಾದರಿಯ ಬಟ್ಟೆ ಮಳಿಗೆ ಆರಂಭಿಸಲು ಚಿಂತನೆ

ಖದ್ದರ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆ  ಶತಮಾನೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಮರಿತಿಬ್ಬೇಗೌಡ, ಎನ್.ಶ್ರೀನಿವಾಸ್, ಎಲ್.ಸೋಮಣ್ಣ ಇತರರಿದ್ದರು.
ಖದ್ದರ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆ ಶತಮಾನೋತ್ಸವ ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಮರಿತಿಬ್ಬೇಗೌಡ, ಎನ್.ಶ್ರೀನಿವಾಸ್, ಎಲ್.ಸೋಮಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಖದ್ದರ್ ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವ ಸಮಾರಂಭದಲ್ಲಿ ನಿರ್ಧಾರ
ಶತಮಾನೋತ್ಸವದ ಸಂಭ್ರಮದಲ್ಲಿರುವ ಖದ್ದರ್ ಕೋ-ಆಪರೇಟಿವ್ ಸೊಸೈಟಿ ಸಂಸ್ಥೆಯು ನಗರದ ದೇವರಾಜ ಅರಸು ರಸ್ತೆಯಲ್ಲಿ ಆಧುನಿಕ ಮಾದರಿಯ ಬಟ್ಟೆ ಮಳಿಗೆ ಆರಂಭಿಸಲು ತೀರ್ಮಾನಿಸಿದೆ.
ನಗರದ ದಿವಾನ್ಸ್ ರಸ್ತೆಯ ಯಾದವ(ಗೊಲ್ಲರ) ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಥೆಯ ಶತಮಾನೋತ್ಸವ ಸಮಾರಂಭ ಹಾಗೂ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಆಡಳಿತ ಮಂಡಳಿ ಹೊಸ ಉದ್ಯಮ ಆರಂಭಿಸುವುದಾಗಿ ಘೋಷಿಸಿದೆ. ಆ ಮೂಲಕ ಸಾಂಪ್ರದಾಯಿಕವಾಗಿ ಬಟ್ಟೆ ವ್ಯಾಪಾರ ನಡೆಸಿಕೊಂಡು ಬಂದಿರುವ ಸಂಸ್ಥೆಯನ್ನು ಆಧುನಿಕ ವಾಣಿಜ್ಯ ವ್ಯವಸ್ಥೆಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ.
ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಸಂಸ್ಥೆಯ ಬೆಳವಣಿಗೆ, ಇದಕ್ಕಾಗಿ ಹಿರಿಯರು ಪಟ್ಟ ಶ್ರಮ ಹಾಗೂ ಸಂಸ್ಥೆ ನಡೆದುಬಂದ ಹಾದಿಯನ್ನು ಮೆಲುಕು ಹಾಕಿದರು. ಸಂಸ್ಥೆಯ ಅಭಿವೃದ್ಧಿಗೆ ಎಂ.ವೆಂಕಟಕೃಷ್ಣ ಅವರ ಕೊಡುಗೆ ಮತ್ತು ಸೇವೆಯನ್ನು ಸ್ಮರಿಸಿದರು.
ಸಂಸ್ಥೆಯ ಅಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ, ಸಂಸ್ಥೆ ಶತಮಾನ ಕಂಡಿರುವುದು ಹೆಮ್ಮೆಯ ಸಂಗತಿಯಾದರೂ ಈ ಹಂತಕ್ಕೆ ತಲುಪಲು ಸಂಸ್ಥೆ ಸಾಕಷ್ಟು ಕಷ್ಟ-ಸವಾಲುಗಳನ್ನು ಎದುರಿಸಿದೆ. 2013ರಲ್ಲಿ ಲ್ಯಾನ್ಸ್‌ಡೌನ್ ಕಟ್ಟಡ ಕುಸಿದ ಬಳಿಕ ಸಂಸ್ಥೆಯ ಚಟುವಟಿಕೆ ಕುಂಠಿತಗೊಂಡವು. ಜತೆಗೆ, ಅಲ್ಲಿ ಕೆಲಸ ಮಾಡುತ್ತಿದ್ದವರ ಜೀವನವೂ ಸಂಕಷ್ಟಕ್ಕೆ ಸಿಲುಕಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಥೆ ನಡೆದುಬಂದ ದಾರಿ, ಎದುರಿಸಿದ ಸಂಕಷ್ಟಗಳು ಹಾಗೂ ಅದರಿಂದ ಹೊರಬರಲು ನಡೆಸಿದ ಪ್ರಯತ್ನಗಳನ್ನು ವಿವರಿಸಿದ ಅವರು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಸ್ಥೆಯ ಹಿರಿಯ ಸದಸ್ಯರಾದ ಎಂ.ಎಲ್.ರಾಮಲಿಂಗಯ್ಯ, ಕೆ.ಜಿ.ಶಂಕರನಾರಾಯಣ ಶಾಸ್ತ್ರಿ, ಟಿ.ವಿ.ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಹರೀಶ್‌ಗೌಡ, ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಸಂಸ್ಥೆಯ ಉಪಾಧ್ಯಕ್ಷ ಎಲ್.ಸೋಮಣ್ಣ, ವ್ಯವಸ್ಥಾಪಕಿ ಕೆ.ಲಲಿತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net