ಹಿಂದೂ ಧರ್ಮ ಎಂಬುದು ಇಲ್ಲ, ರಾಜಕೀಯಕೋಸ್ಕರ ಹಿಂದೂ ಪದ ಬಳಕೆ : ಪ್ರೊ.ಎಸ್.ಜಿ. ಸಿದ್ದರಾಮಯ್ಯ ಟೀಕೆ

ಪ್ರೊ.ಎಸ್.ಜಿ. ಸಿದ್ದರಾಮಯ್ಯ
ಪ್ರೊ.ಎಸ್.ಜಿ. ಸಿದ್ದರಾಮಯ್ಯ
Published on
ಮೈಸೂರು: ರಾಜಕೀಯ ಕಾರಣಕೋಸ್ಕರ ವೈದಿಕ ಧರ್ಮವನ್ನು ಇತ್ತೀಚಿಗೆ ಹಿಂದೂ ಧರ್ಮ ಎಂದು ಕರೆಯಲಾಗುತ್ತಿದೆ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಟೀಕಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾ ಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಧರ್ಮ ಎಂಬುದು ದೇಶದಲ್ಲಿ ಇಲ್ಲ, ಅದು ಮಧ್ಯಕಾಲದಲ್ಲಿ ಹುಟ್ಟಿಕೊಂಡ ಶಬ್ದವೇ ಹೊರತು ಅದು ಧರ್ಮವಲ್ಲ. ಆ ಹಿಂದೂ ಧರ್ಮಕ್ಕೆ ಅಸಮಾನತೆ ನಿವಾರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಹಿಂದೂ ಧರ್ಮದ ವಿರುದ್ಧ ಹಲವು ಧರ್ಮಗಳು ಹುಟ್ಟಿಕೊಂಡಿತು. ಆದರೆ, ಯಾವುದೇ ಧರ್ಮಗಳು ವೈದಿಕವನ್ನು ನೇರವಾಗಿ ಎದುರಿಸಲಿಲ್ಲ. ಆದರೆ, ವೈದಿಕವನ್ನು ಎದುರಿಸಿದ್ದು ಲಿಂಗಾಯತ, ಶರಣ ಧರ್ಮ ಮಾತ್ರ ಎಂದು ಹೇಳಿದರು.
ಶರಣ ಚಳವಳಿ ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿ. ಆದರೆ, ದಕ್ಷಿಣ ಕರ್ನಾಟಕಕ್ಕೆ ವಿಸ್ತರಿಸಿದ್ದು ಶ್ರೀ ಸಿದ್ದರಾಮೇಶ್ವರರು. ದಕ್ಷಿಣ ಕರ್ನಾಟಕದಲ್ಲಿ ಏನಾದರು ಲಿಂಗಾಯತ ಧರ್ಮ ಏನಾದರು ಇದೆ ಅಂದರೆ ಅದಕ್ಕೆ ಮೂಲ ಕಾರಣ ಶ್ರೀ ಸಿದ್ದರಾಮೇಶ್ವರ. ಅವರು ಲಿಂಗಾಯತ ದೀಕ್ಷೆ ನೀಡಿದ ಕಡೆಗಳಲ್ಲೆಲ್ಲ ತೋರು ಗದ್ದುಗೆಗಳನ್ನು ಕಾಣಬಹುದು ಎಂದು ಹೇಳಿದರು.
ಈ ಸಂದರ್ಭ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರಿಗೆ 2025-26ನೇ ಸಾಲಿನ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನನ್ನ ಕುಲೈದವ ಶ್ರೀ ಸಿದ್ದರಾಮೇಶ್ವರರ ಹೆಸರಿನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿರುವುದು ನನ್ನ ಬಾಳಿನ ಭಾಗ್ಯ. ಇದಕೋಸ್ಕರ ನಾನು ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net