ರಾಜ್ಯದಲ್ಲಿ ಜಿಡಿಪಿ ಬೆಳವಣಿಗೆಗೆ ವಿಫುಲ ಅವಕಾಶ

ರಾಣಿಬಹದ್ದೂರು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ  ವಿಚಾರ ಸಂಕಿರಣದಲ್ಲಿ ನಾಗೇಂದ್ರ ಡಿ.ರಾವ್, ವಿನಯ್ ಹೆಗ್ಡೆ,  ದ್ವಾರಕನಾಥ್, ಸಿ.ಕೃಷ್ಣೇಗೌಡ, ಮಧುಸೂದನ್ ಇನ್ನಿತರರಿದ್ದರು.
ರಾಣಿಬಹದ್ದೂರು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ನಾಗೇಂದ್ರ ಡಿ.ರಾವ್, ವಿನಯ್ ಹೆಗ್ಡೆ, ದ್ವಾರಕನಾಥ್, ಸಿ.ಕೃಷ್ಣೇಗೌಡ, ಮಧುಸೂದನ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಭಾರತದಲ್ಲಿ ಮೆಟ್ರೋಪಾಲಿಟಿನ್ ನಗರಗಳಾಚೆ ಬೆಳವಣಿಗೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ
  • ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಿರುವ 3ನೇ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕ ಮುಖ್ಯ ಪಾತ್ರ
ಮೈಸೂರು: ಜಿಡಿಪಿ ಬೆಳವಣಿಗೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಐಸಿಎಸ್‌ಐ ಮೈಸೂರು ಚಾಪ್ಟರ್ ಮಾಜಿ ಅಧ್ಯಕ್ಷ ನಾಗೇಂದ್ರ ಡಿ.ರಾವ್ ಹೇಳಿದರು.
ಐಸಿಎಸ್‌ಐ ವತಿಯಿಂದ ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ದಕ್ಷಿಣ ಭಾರತದಲ್ಲಿ ಮೆಟ್ರೋಪಾಲಿಟಿನ್ ನಗರಗಳಾಚೆ ಬೆಳವಣಿಗೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಿರುವ 3ನೇ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕ ಮುಖ್ಯ ಪಾತ್ರ ವಹಿಸುತ್ತಿದೆ. ಇದರಿಂದ ಹೆಚ್ಚು ಅವಕಾಶಗಳು ತೆರೆದುಕೊಂಡಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದು ರಾಜ್ಯ ಪ್ರಗತಿಗೂ ಕಾರಣವಾಗಲಿದೆ ಎಂದರು.
ದೇಶದ ಜಿಡಿಪಿಯಲ್ಲಿ ಕೊಡುಗೆ ನೀಡುತ್ತಿರುವ ಅಗ್ರ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು 2ನೇ ಸ್ಥಾನದಲ್ಲಿದೆ ಎಂದರು. 
 ಇನ್ಫೋಸಿಸ್‌ನ ಮೈಸೂರು ವಿಭಾಗದ ಉಪಾಧ್ಯಕ್ಷ ವಿನಯ್ ಹೆಗ್ಡೆ, ಐಸಿಎಸ್‌ಐ ಸೆಂಟ್ರಲ್ ಕೌನ್ಸಿಲ್ ಸದಸ್ಯ ದ್ವಾರಕನಾಥ್, ಮೈಸೂರು ಚಾಪ್ಟರ್ ಹಾಲಿ ಅಧ್ಯಕ್ಷ ಸಿ.ಕೃಷ್ಣೇಗೌಡ, ದಕ್ಷಿಣ ಭಾರತದ ಅಧ್ಯಕ್ಷ ಮಧುಸೂಧನ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net