ಸಾಮಾಜಿಕ ಮಾಧ್ಯಮಗಳಲ್ಲಿವೆ ಅಪಾರ ಉಪಯುಕ್ತ ಮಾಹಿತಿ : ಡಿಸಿಪಿ ಬಿಂದುಮಣಿ

ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಮಾನಸ ಯುವ ಸಂವರ್ಧನೆ’ ಯುವ ಸಬಲೀಕರಣ ಮತ್ತು ಔದ್ಯೋಗಿಕ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಆರ್.ಎನ್.ಬಿಂದುಮಣಿ, ಡಾ.ಪಿ.ಶಿವರಾಜು, ಪ್ರೊ.ಎನ್.ಕೆ. ಲೋಕನಾಥ್, ಎಂ.ಕೆ.ಸವಿತಾ ಹಾಗೂ ಇತರರು ಇದ್ದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಮಾನಸ ಯುವ ಸಂವರ್ಧನೆ’ ಯುವ ಸಬಲೀಕರಣ ಮತ್ತು ಔದ್ಯೋಗಿಕ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಆರ್.ಎನ್.ಬಿಂದುಮಣಿ, ಡಾ.ಪಿ.ಶಿವರಾಜು, ಪ್ರೊ.ಎನ್.ಕೆ. ಲೋಕನಾಥ್, ಎಂ.ಕೆ.ಸವಿತಾ ಹಾಗೂ ಇತರರು ಇದ್ದರು.
Published on
ಮೈಸೂರು: ಸಾಮಾಜಿಕ ವಾಧ್ಯಮಗಳಲ್ಲಿ ಅಪಾರ ಉಪಯುಕ್ತ ಮಾಹಿತಿಗಳು ಲಭ್ಯವಿದ್ದು, ಅದನ್ನು ಜಾಣ್ಮೆಯಿಂದ ಸದುಪಂೋಗಪಡಿಸಿಕೊಳ್ಳ ಬೇಕು ಎಂದು ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಆರ್.ಎನ್.ಬಿಂದುಮಣಿ ಹೇಳಿದರು.
ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ‘ಮಾನಸ ಯುವ ಸಂವರ್ಧನೆ’ ಯುವ ಸಬಲೀಕರಣ ಮತ್ತು ಔದ್ಯೋಗಿಕ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಾಧನೆಂು ಹಾದಿಂುಲ್ಲಿ ಅನೇಕ ಅಡೆತಡೆಗಳು ಬರುತ್ತವೆ. ಅವುಗಳಿಗೆ ಎದೆಗುಂದದೆ ಮುಂದುವರಿಂುಬೇಕು ಎಂದು ಹೇಳಿದರು.
ಕಾಲೇಜು ದಿನಗಳಲ್ಲಿ ರಂಗತಂಡ ಸೇರಿದ್ದರಿಂದ ಸಂವಹನ ಕಲೆಯನ್ನು ಮೈಗೂಡಿಸಿಕೊಂಡೆ. ಅದರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ಮುಖಮಾಡಿ, ಪರಿಶ್ರಮ ಪಟ್ಟು ಇಂದು ಈ ಸ್ಥಾನ ಪಡೆಯಲು ಸಾಧ್ಯವಾಗಿದೆ. ಶಿಕ್ಷಣದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೆ. ಅದೊಂದೇ ನಮ್ಮ ಬದುಕಿನ ಶಕ್ತಿ. ಸ್ಪರ್ಧಾತ್ಮಕ ಪರೀಕ್ಷೆಗೆ ವಾರ್ಗದರ್ಶನದ ಕೊರತೆ ಇದ್ದಾಗ, ವ್ಯವಸ್ಥಿತ ತಂಾರಿ ಸಾಧ್ಯವಾಗುವುದಿಲ್ಲ ಎಂದರು.
ಸಮಂು ಸಿಕ್ಕಾಗಲೆಲ್ಲ ದಿನಪತ್ರಿಕೆ ಓದುತ್ತಿದ್ದೆ. ಬೆಳಗ್ಗೆಯಿಂದ ರಾತ್ರಿಂುವರೆಗೆ ಓದುವುದನ್ನೇ ಬದುಕಿನ ಭಾಗವಾಗಿಸಿಕೊಂಡೆ. ಇವತ್ತು ಸ್ಪರ್ಧಾತ್ಮಕ ಪರೀಕ್ಷೆಂುನ್ನು ಲಕ್ಷಾಂತರ ಂುುವ ಜನರು ಎದುರಿಸುತ್ತಿದ್ದಾರೆ. ಹಲವರು ಗುರಿ ಮುಟ್ಟಲು ಸಾಧ್ಯವಾಗದೆ ಅರ್ಧದಲ್ಲೇ ಹಿಂದೆ ಸರಿಯುತ್ತಾರೆ. ನಾವು ಎಷ್ಟು ಓದುತ್ತೇವೆ ಅನ್ನುವುದು ಮುಖ್ಯವಲ್ಲ. ಎಷ್ಟು ಪಕ್ವವಾಗಿ ಓದಬೇಕು ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಇಡೀ ಸವಾಜವೇ ತಿರುಗಿ ನೋಡುವ ಹಾಗೆ ಜೀವನದಲ್ಲಿ ಸಾಧನೆ ಮಾಡಬೇಕು. ನಮ್ಮಂತಹ ಅಧಿಕಾರಿಗಳು ನಿಮ್ಮ ಸಾಧನೆಂುನ್ನು ಗೌರವಿಸುವಂತಾಗಬೇಕು ಎಂದು ಕರೆ ನೀಡಿದರು.
ನನ್ನ ಜೀವನದಲ್ಲಿ ಂಾವುದೇ ಒಂದು ಪರೀಕ್ಷೆಂುಲ್ಲಿ ಅನುತ್ತೀರ್ಣ ನಾಗಬಾರದು ಅನ್ನುವ ಸಂಕಲ್ಪ ತೊಟ್ಟು, ಅಂದುಕೊಂಡಿದ್ದನ್ನು ಸಾಧಿಸಿದೆ. ನನಗೆ ಕನ್ನಡದಲ್ಲಿ ಐಎಎಸ್ ವಾಡುವ ಕನಸಿತ್ತು. ಅದಕ್ಕೆಲ್ಲ ಸ್ಫೂರ್ತಿ ರಾಷ್ಟ್ರಕವಿ ಕುವೆಂಪು. ಅವರ ಮಾತಿನಂತೆ ವಿದ್ಯಾರ್ಥಿಗಳು ಭತ್ತ ಬೆಳೆಂುುವ ಗದ್ದೆಗಳಾಗಬೇಕು, ಭತ್ತ ತುಂಬುವ ಚೀಲಗಳಾಗಬಾರದು ಎಂದು ಕಿವಿಮಾತು ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಡಾ.ಎನ್. ನಾಗರಾಜು, ಮಾನಸ ಯುವ ಸಂವರ್ಧನೆ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರೊ.ಡಿ.ಆನಂದ್, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ ಲೋಲಾಕ್ಷಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net