ರಾಜಕಾರಣಿಗಳಿಗಿಂತ ದೊಡ್ಡ ನಟರಿಲ್ಲ

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಆರ್.ರಮೇಶ್ ಕುಮಾರ್, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಪ್ರೊ.ಶರಣಪ್ಪ ವಿ. ಹಲಸೆ, ಪ್ರೊ.ಎಸ್.ಕೆ.ನವೀನ್ ಕುಮಾರ್, ಎಂ.ಕೆ. ಸವಿತಾ ಇದ್ದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಆರ್.ರಮೇಶ್ ಕುಮಾರ್, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಪ್ರೊ.ಶರಣಪ್ಪ ವಿ. ಹಲಸೆ, ಪ್ರೊ.ಎಸ್.ಕೆ.ನವೀನ್ ಕುಮಾರ್, ಎಂ.ಕೆ. ಸವಿತಾ ಇದ್ದರು.
Published on
ರಾಜಕಾರಣಿಗಳಿಗಿಂತ ದೊಡ್ಡ ನಟರಿಲ್ಲ. ಅವರನ್ನು ಮೀರಿಸಲು ಡಾ.ರಾಜ್‌ಕುಮಾರ್ ಅವರ ನಟನೆಯೂ ಸಾಕಾಗುವುದಿಲ್ಲ ಎಂದು ವಿಧಾನಸಭೆ ಮಾಜಿ ಸಭಾಪತಿ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರದ ಅಧ್ಯಾಪಕರ ಸಂಘದ 21 ಮಹಾಸಮ್ಮೇಳನ ಮತ್ತು ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜಕಾರಣಿಗಳ ನಟನೆ ಮುಂದೆ ಅವರ ನಟನೆ ಕೆಲಸ ಮಾಡುವುದಿಲ್ಲ. ಇದನ್ನು ರಾಜ್ಯಶಾಸ್ತ್ರದ ಸಿಲಬಸ್‌ಗಳಲ್ಲಿ ಹೇಳಿರುವುದಿಲ್ಲ. ಕ್ಯಾಲೆಂಡರ್, ಸಮಯದ ಬಗ್ಗೆ ಹೆಚ್ಚು ತಿಳಿದುಕೊಂಡಿರುವುದು ರಾಜಕಾರಣಿಗಳು ಮಾತ್ರ. ಕೌಂಟಿಂಗ್ ಯಾವಾಗ ಆಗುತ್ತದೆ, ಮುಂದಿನ ಚುನಾವಣೆ ಯಾವಾಗ ನಡೆಯುತ್ತದೆ. ಈ ಮಧ್ಯಂತರ ಅವಧಿಯಲ್ಲಿ ಜನರ ಮುಂದೆ ಯಾವ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಬೇಕು ಎಂದು ತಿಳಿದುಕೊಂಡಿರುತ್ತಾರೆ ಎಂದರು.
ಮಾಧ್ಯಮಗಳ ಮುಖಾಂತರ ಅಥವಾ ವಿಧಾನಸಭೆ ಸದಸ್ಯರಾಗಿದ್ದಾಗ ಕಲಾಪಗಳಲ್ಲಿ ಭಾಗವಹಿಸುವ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವಂತಹ ನಿಲುವು, ನಾವು ಆಡುವಂತಹ ಮಾತುಗಳು ಹಾಗೂ ನಾವು ಪ್ರತಿಪಾದಿಸುವ ಕೆಲವು ವಿಚಾರಗಳು ಸಹಜವಾಗಿ ಪ್ರತಿಯೊಬ್ಬ ರಾಜಕೀಯ ಜೀವನದಲ್ಲಿ ಇರುವಂತಹದ್ದನ್ನು ಸಮಾಜಕ್ಕೆ ಪರಿಚಯ ಮಾಡಿಸುತ್ತದೆ ಎಂದರು.
ಮೈಸೂರು ರಾಜರು ಪರೋಪಕಾರಿಗಳು. ದೇಶದ ಇತರ ರಾಜರು ಅಥವಾ ಬೇರೆ ದೇಶದ ರಾಜರು ಮೈಸೂರು ರಾಜರ ಹಾಗೆ ಇರಲಿಲ್ಲ. ಇವರನ್ನು ಇಂದಿಗೂ ನೆನಪಿಸಿಕೊಳ್ಳಬೇಕು. ಆಂಗ್ಲರು ನಮ್ಮ ದೇಶವನ್ನು ಆಳುತ್ತಿದ್ದ ಸಮಯದಲ್ಲೇ, ಪ್ರಜಾಪ್ರಭುತ್ವದ ಮಾತು ಮಹತ್ವ ಪಡೆದುಕೊಳ್ಳದೆ ಇದ್ದ ಕಾಲದಲ್ಲಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಇಲ್ಲಿ ಮಾಡಲು ಅಂದಿನ ರಾಜರು ಅವಕಾಶ ಕೊಟ್ಟರು ಎಂದು ತಿಳಿಸಿದರು.
ರಾಜರು ಇಲ್ಲಿನ ಪ್ರಜೆಗಳಿಗೆ ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಲು, ಪ್ರಶ್ನೆ ಮಾಡಲು ಅವಕಾಶ ನೀಡುತ್ತಿದ್ದರು. ಚುನಾವಣಾ ಹಂತಕ್ಕೆ ಬಂದು ಚುನಾವಣೆಗೆ ಯರ‌್ಯಾರು ಇರಬೇಕು ಎಂದು ಹೇಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೂ, ಕನ್ನಡಿಗರಿಗೂ ಸಂಬಂಧ ಇದೆ. ವಿಶ್ವದ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಬೆಳವಣಿಗೆಗೆ ನಮ್ಮದು ಎಲ್ಲೋ ಒಂದು ಪಾತ್ರ ಇದೆ ಎಂದರು.
ಇಂಗ್ಲೆಂಡ್ ದೇಶದಲ್ಲಿ ರಾಜರು ವಿಲಾಸಿ ಜೀವನಕ್ಕೆ ಜೋತು ಬೀಳುತ್ತಾರೆ. ಅವರು ಜನರು, ದೇಶ ಏನಾದರೂ ಆಗಲಿ ಎಂದು ಮೋಜಿಗೆ ಬೀಳುತ್ತಾರೆ. ವಿಲಾಸಿ ಜೀವನಕ್ಕೆ ದುಡ್ಡು ಬೇಕಾಗುತ್ತದೆ. ಹೀಗಾಗಿ ಜನರ ಮೇಲೆ ಅಧಿಕ ತೆರಿಗೆ ಹಾಕಿದರು. ರಾಜರು ಹೇಳಿದ ತಕ್ಷಣ ಮಾತುಗಳನ್ನು ಪಾಲಿಸಲು ಭಟ್ಟಂಗಿಗಳು ಇರುತ್ತಾರೆ. ದೊರೆಯನ್ನು ಮೆಚ್ಚಿ ಭಟ್ಟಂಗಿ, ಅವಿವೇಕಿಯಾದ ದೊರೆ, ಇಬ್ಬರೂ ಸೇರಿ ಜನರ ಮೇಲೆ ಬೀಳುತ್ತಾರೆ ಎಂದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಮುಂದಿನ ಪೀಳಿಗೆಗೆ ರಾಜ್ಯಶಾಸ್ತ್ರದ ಬಗ್ಗೆ ತಿಳಿಸುವುದರ ಜತೆಗೆ ಪ್ರಜಾಪ್ರಭುತ್ವವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಯುವಕರಿಗೆ ಅರಿವು ಮೂಡಿಸಬೇಕು ಎಂದರು.
ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊವೆಲೆರಿಯನ್ ರೋಡ್ರಿಗಸ್, ಪ್ರೊ.ಜೆ.ಸೋಮಶೇಖರ್, ಪ್ರೊ.ಕೃಷ್ಣ ಹೊಂಬಳ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net