ಜಿಡಿಪಿ ಬೆಳವಣಿಗೆಗೆ ಯುವಶಕ್ತಿ ಪಾತ್ರ ಪ್ರಮುಖ

ನಗರದ ವಿದ್ಯಾವರ್ಧಕ  ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಡಾ.ಎಸ್.ತುಳಸಿರಾಮ್, ಡಾ.ಬಿ.ಎಸ್.ಶ್ರೀಹರ್ಷ, ಆರ್.ಸಿದ್ದರಾಜು, ಎಸ್.ಲಾವಣ್ಯಾ ಇದ್ದರು.
ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಡಾ.ಎಸ್.ತುಳಸಿರಾಮ್, ಡಾ.ಬಿ.ಎಸ್.ಶ್ರೀಹರ್ಷ, ಆರ್.ಸಿದ್ದರಾಜು, ಎಸ್.ಲಾವಣ್ಯಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ಪ್ರಾಧ್ಯಾಪಕ ಡಾ.ಎಸ್.ತುಳಸಿರಾಮ್ ಹೇಳಿಕೆ
  • ಆದಾಯ ಕೊರತೆಯಿರುವುದರಿಂದ ಸರ್ಕಾರ ಅನಿವಾರ್ಯವಾಗಿ ಕೊರತೆ ಆಯವ್ಯಯ
  • ಜಿಡಿಪಿ ಗಾತ್ರದಲ್ಲಿ ಭಾರತ ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನವನ್ನು ಪಡೆಯಲು ಯುವಶಕ್ತಿಯ ಪಾತ್ರ ಪ್ರಮುಖ
ಮೈಸೂರು: ಇತ್ತೀಚೆಗೆ ಮಂಡಿಸಿರುವ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮೂಲಸೌಕರ್ಯ ಮತ್ತು ರಕ್ಷಣಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ದೇಶದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ತುಳಸಿರಾಮ್ ಹೇಳಿದರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಕೇಂದ್ರ ಸರ್ಕಾರದ ಬಜೆಟ್‌ನ ಒಳನೋಟಗಳು ಕುರಿತು ಇತ್ತೀಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
ಭಾರತ ಪ್ರಪಂಚದ ಅತಿದೊಡ್ಡ ಜನಸಂಖ್ಯಾಭರಿತ ರಾಷ್ಟ್ರವಾಗಿದ್ದು ಜಿಡಿಪಿಯ ಗ್ರಾತದಲ್ಲಿ 4ನೇ ಅತಿ ದೊಡ್ಡ ದೇಶವಾಗಿದೆ. ಇದರ ನಿರ್ವಹಣೆಗಾಗಿ ಪ್ರತಿ ವರ್ಷ ಕೇಂದ್ರ ಸರ್ಕಾರವು ಆಯವ್ಯಯವನ್ನು ಮಂಡಿಸುತ್ತದೆ. ಭಾರತದಲ್ಲಿ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಬರುವ ಆದಾಯ ಕೊರತೆಯಿರುವುದರಿಂದ ಸರ್ಕಾರ ಅನಿವಾರ್ಯವಾಗಿ ಕೊರತೆ ಆಯವ್ಯಯ ಸಿದ್ಧಪಡಿಸಬೇಕಾಗುತ್ತದೆ ಎಂದರು.
ಎಫ್‌ಆರ್‌ಬಿಎಂ ಕಾಯ್ದೆ 2003, ಭಾರತದ ಆರ್ಥಿಕ ಸಮೀಕ್ಷೆ 2026, ಐಎಂಎಫ್ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಹೊರನೋಟ ಸಮೀಕ್ಷೆಯು ಭಾರತದ ಜಿಡಿಪಿ 2026ರಲ್ಲಿ ಶೇ.7.3 ಹಾಗೂ 2027ರಲ್ಲಿ ಶೇ.6.4 ಇರಲಿದೆ ಎಂದು ಅಂದಾಜಿಸಿದೆ. 
ಈ ಬಾರಿ ಅತಿಹೆಚ್ಚು ಹಣಕಾಸನ್ನು ಬಂಡವಾಳ ವೆಚ್ಚಕ್ಕೆ ಅಂದರೆ ಶೇ.12.22 ಮೀಸಲಿರಿಸಲಾಗಿದೆ. 2047ರ ಸ್ವತಂತ್ರ ಭಾರತದ ಶತಮಾನೋತ್ಸವದ ಹೆಗ್ಗುರುತಿಗೆ ಕೈಗನ್ನಡಿ ಆಗಿದ್ದು, ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಆಶಯಗಳೊಂದಿಗೆ ಯೂರೋಪಿಯನ್ ಒಕ್ಕೂಟದ ಜತೆ ಮಾಡಿಕೊಂಡಿರುವುದು ಜಿಡಿಪಿ ಬೆಳವಣಿಗೆಯ ವೇಗವನ್ನು ಹೆಚ್ಚಿಸಿದೆ. ಜಿಡಿಪಿ ಗಾತ್ರದಲ್ಲಿ ಭಾರತ ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನವನ್ನು ಪಡೆಯಲು ಯುವಶಕ್ತಿಯ ಪಾತ್ರ ಪ್ರಮುಖ ಎಂದರು.
ಡಾ.ಬಿ.ಎಸ್.ಶ್ರೀಹರ್ಷ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಅತಿ ಹೆಚ್ಚು ಅನುದಾನ ನೀಡಿದ್ದು, ಕೊರತೆಯ ಬೃಹತ್ ಬಜೆಟ್ ಮಂಡನೆಯಾಗಿದೆ ಎಂದು ತಿಳಿಸಿದರು.  
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಸಿದ್ದರಾಜು, ಅಧ್ಯಾಪಕಿ ಎಸ್.ಲಾವಣ್ಯಾ, ಟಿ.ಪವಿತ್ರಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net