ಶೋಷಿತರು ಸಂಘಟಿತರಾಗಿ ಹೋರಾಟ ನಡೆಸಿ

ಸರಗೂರು ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಮೈಸೂರು (ಅಂಬೇಡ್ಕರ್ ವಾದ) ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಯಿತು. ಬನ್ನಹಳ್ಳಿ ಸೋಮಣ್ಣ, ಸಣ್ಣ ಕುಮಾರ್, ಅನುಷಾ ಕೋಟೆ, ಉದಯ್, ಸತೀಶ್, ಕೃಷ್ಣ, ಗೋಪಾಲ್, ಮುಬಾರಕ್ ಇತರರಿದ್ದರು.
ಸರಗೂರು ತಾಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಮೈಸೂರು (ಅಂಬೇಡ್ಕರ್ ವಾದ) ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಯಿತು. ಬನ್ನಹಳ್ಳಿ ಸೋಮಣ್ಣ, ಸಣ್ಣ ಕುಮಾರ್, ಅನುಷಾ ಕೋಟೆ, ಉದಯ್, ಸತೀಶ್, ಕೃಷ್ಣ, ಗೋಪಾಲ್, ಮುಬಾರಕ್ ಇತರರಿದ್ದರು.
Published on
ಸರಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ ಮೈಸೂರು (ಅಂಬೇಡ್ಕರ್ ವಾದ) ಶಾಖೆಯ ವತಿಯಿಂದ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ನೇತೃತ್ವದಲ್ಲಿ ತಾಲೂಕು ಸಮಿತಿ ರಚನೆ ಮಾಡಿ ತಾಲೂಕು ಸಂಚಾಲಕರಾಗಿ ಎಸ್.ಬಿ.ಸುರೇಶ್ ಸರಗೂರು, ಪದಾಧಿಕಾರಿಗಳಾಗಿ ಪ್ರಸಾದ್, ನವೀನ್, ಶಿವು, ಶಂಕರ್, ಸಂತೋಷ್, ಎಸ್.ಡಿ.ಪ್ರಸಾದ್, ಮುಬಾರಕ್, ರಾಜೇಶ್, ನಂಜುಂಡ ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನೆಯ ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಗ್ರಾಮೀಣ ಮಟ್ಟದಿಂದಲೇ ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆಯ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ತಾಲೂಕು ದಲಿತ ಸಂಘರ್ಷ ಸಮಿತಿ ಮೈಸೂರು ಅಂಬೇಡ್ಕರ್ ವಾದ ಸಂಚಾಲಕ ಸಣ್ಣ ಕುಮಾರ್ ಮಾತನಾಡಿ, ನೂತನ ಪದಾಧಿಕಾರಿಗಳು ಸಂಘಟನೆಯ ತತ್ವ, ಸಿದ್ಧಾಂತ ಹಾಗೂ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಮಹಿಳಾ ಘಟಕ ಜಿಲ್ಲಾ ಸಂಚಾಲಕಿ ಅನುಷಾ ಕೋಟೆ, ಉದಯ್, ಸತೀಶ್, ಸಂಜು, ಗೋಪಾಲ್, ಕೃಷ್ಣ, ಮುಬಾರಕ್, ಪ್ರಕಾಶ್, ಶಿವು, ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮುಖಂಡರು, ವಿವಿಧ ಗ್ರಾಮಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net