

ಆಷಾಢ ಮಾಸದ ಮೂರನೇ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಭಕ್ತಿ ಜತೆಗೆ ಮಂಜು ಮತ್ತು ಮಳೆಯ ಅಪೂರ್ವ ಸಂಗಮ ಕಂಡುಬಂತು. ಬೆಳಗ್ಗಿನಿಂದಲೇ ಚಾಮುಂಡಿಬೆಟ್ಟ ದಟ್ಟ ಮಂಜಿನ ಹೊದಿಕೆಯಲ್ಲಿ ಕಂಗೊಳಿಸಿತು. ಈ ಮಧ್ಯೆ ಸುರಿದ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಪುನೀತರಾದರು.