ಗ್ರಾಮೀಣ ಮಹಿಳೆಯರ ಆರೋಗ್ಯ, ಸಬಲೀಕರಣ ಮುಖ್ಯ ಉದ್ದೇಶ

ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನ್ಯೂ ಪ್ರಿಯದರ್ಶಿನಿ ಆಸ್ಪತ್ರೆ ಮತ್ತು ಪ್ರಣವ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾರಾವ್ ಚಾಲನೆ ನೀಡಿದರು. ಸದಾನಂದ ದೇವಾಡಿಗ, ಪ್ರಭು, ಸಂದೀಪ್, ನಿರಂಜನ್, ಸಿ.ಮಹದೇವಸ್ವಾಮಿ ಇನ್ನಿತರರು ಇದ್ದರು.
ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನ್ಯೂ ಪ್ರಿಯದರ್ಶಿನಿ ಆಸ್ಪತ್ರೆ ಮತ್ತು ಪ್ರಣವ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾರಾವ್ ಚಾಲನೆ ನೀಡಿದರು. ಸದಾನಂದ ದೇವಾಡಿಗ, ಪ್ರಭು, ಸಂದೀಪ್, ನಿರಂಜನ್, ಸಿ.ಮಹದೇವಸ್ವಾಮಿ ಇನ್ನಿತರರು ಇದ್ದರು.
Published on

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಮಮತಾರಾವ್ ಹೇಳಿಕೆ

ಕೆ.ಆರ್.ನಗರ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಆರ್ಥಿಕ ಸಬಲೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮೀಣ ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣವೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾರಾವ್ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯ ಸವಿತಾ ಮಹರ್ಷಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನ್ಯೂ ಪ್ರಿಯದರ್ಶಿನಿ ಆಸ್ಪತ್ರೆ ಮತ್ತು ಪ್ರಣವ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯಕ್ಕಿಂತ ಅಮೂಲ್ಯವಾದ ಸಂಪತ್ತು ಮತ್ತೊಂದಿಲ್ಲ. ಬದುಕಿನಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಿರಬೇಕು. ಆರೋಗ್ಯ ತಪಾಷಣೆ ಶಿಬಿರಗಳಿಂದ ಅನೇಕ ಕಾಯಿಲೆಗಳನ್ನು ಆರಂಭದಲ್ಲಿಯೇ ಗುರುತಿಸಿ ಮುಂದೆ ಉಂಟಾಗಬಹುದಾದ ತೊಂದರೆಗಳಿಂದ ಪಾರಾಗಬಹುದು ಎಂದರು.
ಆರೋಗ್ಯ ತಪಾಸಣೆ ಶಿಬಿರಗಳು ಸಾರ್ವಜನಿಕರಿಗೆ ಯಾವುದೇ ಶುಲ್ಕವಿಲ್ಲದೆ ಪ್ರಾಥಮಿಕ ವೈದ್ಯಕೀಯ ತಪಾಸಣೆ ಮತ್ತು ಸಲಹೆಗಳನ್ನು ನೀಡುವ ಸಮಾಜಮುಖಿ ಕಾರ್ಯಕ್ರಮಗಳಾಗಿವೆ. ಜನತೆ ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ 250ಕ್ಕೂ ಹೆಚ್ಚು ಮಹಿಳೆಯರ ಆರೋಗ್ಯ ತಪಾಸಣೆ ಮಾಡಿಸಿದರು. ನಂತರ ಅಗತ್ಯವಿರುವವರಿಗೆ ಸ್ಥಳದಲ್ಲೇ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸದಾನಂದ ದೇವಾಡಿಗ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳುವಂತೆ ಆರೋಗ್ಯವೇ ನಿಜವಾದ ಸಂಪತ್ತು. ನಮ್ಮ ತಾಯಂದಿರು ಇಡೀ ಕುಟುಂಬದ ಆರೋಗ್ಯ ನೋಡಿಕೊಳ್ಳುತ್ತಾರೆ. ಆದರೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. 10 ಜನ ಮಹಿಳೆಯರಲ್ಲಿ 4 ಜನರಿಗೆ ಬಿಪಿ, ಶುಗರ್ ಇದ್ದರೂ ಅವರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿ ಈ ಶಿಬಿರವನ್ನು ಆಯೋಜಿಸಿದ್ದೇವೆ. ಬೈಕ್, ಕಾರಿಗೆ ಸರ್ವೀಸ್ ಮಾಡಿಸುವಂತೆ ವರ್ಷಕ್ಕೊಮ್ಮೆ ನಮ್ಮ ದೇಹವನ್ನು ತಪಾಸಣೆ ಮಾಡಿಸಬೇಕು. ಈ ಶಿಬಿರದಲ್ಲಿ 250 ತಾಯಂದಿರು ಪ್ರಯೋಜನ ಪಡೆದಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾಮಧೇನು ಸ್ವೀಟ್ಸ್ ಮಾಲೀಕ ನಾಗೇಶ್, ಪ್ರಣವ್ ಟ್ರಸ್ಟ್ ಮ್ಯಾನೇಜರ್ ಪ್ರಭು, ಸಂದೀಪ್, ನಿರಂಜನ್, ಸಂಸ್ಥೆಯ ವಲಯ ಮೇಲ್ವಿಚಾರಕರಾದ ರವಿ, ರಾಣಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅನುಷಾ, ಕೃಷಿ ಮೇಲ್ವಿಚಾರಕ ಸಿ.ಮಹದೇವಸ್ವಾಮಿ, ವೀಕ್ಷಣಾಧಿಕಾರಿ ಸೋಮಶೇಖರ್, ಎಎಸ್‌ಜಿ ಆಸ್ಪತ್ರೆಯ ಕಣ್ಣಿನ ತಜ್ಞ ಡಾ.ಬಸವರಾಜು, ಆಂಕೋ ಸರ್ಜನ್ ಡಾ.ಐಶ್ವರ್ಯಾ, ತಜ್ಞ ವೈದ್ಯ ಡಾ. ವಿನಯ್‌ಕುಮಾರ್ ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net