ಹೊರ ರಾಜ್ಯಗಳಿಂದ ಬಂದವರು ಬೆಂಗಳೂರಿನಲ್ಲಿ ಆಟೋರಿಕ್ಷಾ, ಕಾರು ಚಾಲಕರಾಗಿ, ಹೋಟೆಲ್‌ಗಳಿಂದ ಹಿಡಿದು ಕಟ್ಟಡ ನಿರ್ಮಾಣ, ಕಾರ್ಖಾನೆ, ಭದ್ರತಾ ಸಂಸ್ಥೆ, ಬೀದಿ ಬದಿ ವ್ಯಾಪಾರ ಮೊದಲಾದವುಗಳಲ್ಲಿ ಸಿಂಹಪಾಲು ಉದ್ಯೋಗ ತಮ್ಮದಾಗಿಸಿಕೊಂಡಿದ್ದಾರೆ. ಇದರಿಂದಾಗಿ ಕನ್ನಡಿಗರ ಉದ್ಯೋಗಕ್ಕೆ ಕುತ್ತು ಬಂದಿದೆ. ಹೀಗಾಗಿ ಸರ್ಕಾರ ಕನ್ನಡಿಗರ ಉದ್ಯೋಗ ಭದ್ರತೆಯತ್ತ ಗಮನ ಹರಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.