ಡಿಜಿಟಲ್ ಜಗತ್ತಿನಿಂದ ಮನುಷ್ಯನ ಸ್ವಾತಂತ್ರ್ಯ ಹರಣ

ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಚಿತ್ರ ಸಾಹಿತಿ ಕವಿರಾಜ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್, ಧರ್ಮಾಪುರ ನಾರಾಯಣ್, ಆರ್.ಕುಮಾರ್, ಡಾ.ಬಸವರಾಜ ಇದ್ದರು.
ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಚಿತ್ರ ಸಾಹಿತಿ ಕವಿರಾಜ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್, ಧರ್ಮಾಪುರ ನಾರಾಯಣ್, ಆರ್.ಕುಮಾರ್, ಡಾ.ಬಸವರಾಜ ಇದ್ದರು.
Published on
ಹುಣಸೂರು : ಡಿಜಿಟಲ್ ಜಗತ್ತು ಮನುಷ್ಯನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಚಿತ್ರ ಸಾಹಿತಿ, ಗೀತ ರಚನೆಕಾರ ಕವಿರಾಜ್ ಅಭಿಪ್ರಾಯಪಟ್ಟರು.

ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ವಿವಿಧ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳುಗಳನ್ನು ವಿದ್ಯಾರ್ಥಿಗಳು ಸತ್ಯ ಎಂದು ನಂಬುತ್ತಿದ್ದಾರೆ. ಅದರ ಸತ್ಯಾಸತ್ಯತೆ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಮುಂದುವರಿದ ಎಐ(ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಎಲ್ಲವನ್ನೂ ನೀಡುತ್ತಿದೆ. ನಮ್ಮ ಆಲೋಚನೆಯು ಬೇರೊಬ್ಬರಿಂದ ನಿಯಂತ್ರಿಸಲ್ಪಡುತ್ತಿದೆ. ನಮ್ಮ ಸ್ವಾತಂತ್ರ್ಯ ಹರಣವಾಗುತ್ತಿದೆ. ಸಾಹಿತಿ ತನ್ನ ಕಥೆಯ ವಿಸ್ತಾರವನ್ನು ಎಐ ಮೂಲಕ ಗಳಿಸಿ ಸಾಹಿತ್ಯ ರಚಿಸುತ್ತಾನೆ ಎನ್ನುವುದಾದರೆ ಸಾಹಿತಿಯ ಮನಸಿನ ಮೂಲ ಯೋಚನೆ ಸೋತಂತೆ ಅಲ್ಲವೇ? ಆಧುನಿಕತೆ ಬೇಕು. ಆದರೆ ಅದರ ಸದ್ಬಳಕೆಯಲ್ಲಿನ ಲೋಪದೋಷಗಳೇ ಇಂದಿನ ದುರಂತ ಘಟನೆಗಳಿಗೆ ಕಾರಣವಾಗಿದೆ. ಕಾಲೇಜಿನಲ್ಲಿ ಆಯೋಜಿಸುವ ವಿವಿಧ ಘಟಕಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡುತ್ತದೆ. ಕೇವಲ ಪಠ್ಯಪುಸ್ತಕದಲ್ಲಿ ಸಾಧನೆಗೈದರೆ ಸಾಲದು. ಜ್ಞಾನ ಇದ್ದು ಆತ್ಮವಿಶ್ವಾಸವಿಲ್ಲದಿದ್ದರೆ ಪ್ರಯೋಜನವಿಲ್ಲ. ನಿಜಜೀವನದ ಪಠ್ಯದಲ್ಲೂ ಸಾಧಿಸಲು ಇಂತಹ ಪಠ್ಯೇತರ ಚಟುವಟಿಕೆಗಳು ಉತ್ತಮ ವೇದಿಕೆಗಳಾಗಿವೆ ಎಂದರು.

ನಗರಸಭೆ ಪೌರಾಯುಕ್ತೆ ಎಂ.ಮಾನಸಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಸಾಧಿಸುವ ಇಚ್ಛಾಶಕ್ತಿ, ಶಿಕ್ಷಣ ಶಕ್ತಿ ಮತ್ತು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಲ್ಲಿ ಮಾತ್ರ ಸಾಧನೆಯ ಮೆಟ್ಟಿಲುಗಳನ್ನು ಏರಲು ಸಾಧ್ಯ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿದರು. ಪ್ರಾಂಶುಪಾಲ ಡಾ.ಬಿ.ಸಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ, ಸಾಂಸ್ಕೃತಿಕ ಸಮಿತಿ ಸಂಚಾಲಕ ಆರ್.ಕುಮಾರ್, ಕ್ರೀಡಾ ಸಂಚಾಲಕ ಸಿ.ಕುಮಾರ್, ಎನ್‌ಎಸ್‌ಎಸ್ ಸಂಚಾಲಕರಾದ ಭೋಜರಾಜ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಸಂಚಾಲಕ ಡಾ.ಮಂಜು, ಚೇತನ್, ವಿದ್ಯಾರ್ಥಿಸಂಘದ ಅಧ್ಯಕ್ಷೆ ಡಿ.ಕೆ.ದೀಕ್ಷಿತಾ, ಉಪಾಧ್ಯಕ್ಷರಾದ ಮಂಜು, ರಕ್ಷಿತಾ, ಕಾರ್ಯದರ್ಶಿಗಳಾದ ಜೀವನ್, ನಯನಾ, ಸಹಕಾರ್ಯದರ್ಶಿಗಳಾದ ಪ್ರೀತಮ್, ಅಂಕಿತಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net