ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವಲಯದ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯದ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು.
ದಿನಾಚರಣೆ ಅಂಗವಾಗಿ ಅರಿವು ಕಲಾತಂಡದಿಂದ ಹುಲಿ ಕಾಡುಗಳ ಸಂರಕ್ಷರಣೆ ಕುರಿತು ನಾಟಕ ಪ್ರದರ್ಶಿಸಲಾಯಿತು. ಶಾಲಾ ಮಕ್ಕಳಿಗೆ ರಸಪ್ರಶ್ನೆ ಮತ್ತು ಪ್ರಬಂಧಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬೆಂಗಳೂರಿನ ಸುರಾನಾ ಕಾಲೇಜು ಪ್ರಾಂಶುಪಾಲ ಕಾರ್ತಿಕ್ ಕೃಷ್ಣನ್ ಮಾತನಾಡಿ, ಉದ್ಯಾನವನದಲ್ಲಿ ವನ್ಯಜೀವಿಗಳ ಆಹಾರ ಚಕ್ರವನ್ನು ಗಮನಿಸಿದರೆ ಹುಲಿಯ ಪಾತ್ರ ಎಷ್ಟು ಮಹತ್ವದ್ದು ಎನ್ನುವುದನ್ನು ಅರಿಯಬಹುದಾಗಿದೆ. ಹುಲಿ ಮೊದಲ ಪರಭಕ್ಷಕನಾಗಿ ಇಡೀ ಕಾಡಿನ ಪ್ರಾಣಿಗಳು ಮತ್ತು ಸಂಪತ್ತಿನ ಸಮತೋಲವನ್ನು ಕಾಯ್ದುಕೊಳ್ಳುತ್ತೆ ಎಂದು ಮಾಹಿತಿ ನೀಡಿದರು.
ಮೇಟಿಕುಪ್ಪೆ ವನ್ಯಜೀವಿನ ಉಪವಿಭಾಗದ ಎಸಿಎಫ್ ಎಸ್.ಡಿ.ಮಧು, ಆರ್‌ಎಫ್‌ಒ ಹನುಮಂತರಾಜು ಮಾತನಾಡಿದರು. ಆರ್‌ಎಫಒ ಸಿದ್ದರಾಜು, ಮಗ್ಗೆ ಶಾಲೆಯ ಮುಖ್ಯಶಿಕ್ಷಕಿ ಜಯಶ್ರೀ, ಉಪವಲಯ ಅರಣ್ಯಾಧಿಕಾರಿಗಳು ಇತರ ಸಿಬ್ಬಂದಿ ಭಾಗವಹಿಸಿದ್ದರು.
ರಸಪ್ರಶ್ನೆ: ವಿನಯ್(ಪ್ರಥಮ ಸ್ಥಾನ), ಸ್ನೇಹ(ದ್ವಿತೀಯ) ಹಾಗೂ ಕೃಷ್ಣವೇಣಿ(ತೃತೀಯ) ರುಕ್ಮಿಣಿ ಮತ್ತು ಅನುಶ್ರೀ(ಸಮಾಧಾನಕರ). ಪ್ರಬಂಧ ಸ್ಪರ್ಧೆಯಲ್ಲಿ ನಾಗು(ಪ್ರಥಮ), ನಂದಿತಾ(ದ್ವಿತೀಯ) ಹಾಗೂ ಜಯಲಕ್ಷ್ಮೀ(ತೃತೀಯ)ಗಳಿಸಿದರು.