ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತರ ಅನುಕೂಲಕ್ಕಾಗಿ ಲಚ್ಯಾಣ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ

Temporary Stoppage
Temporary Stoppage
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ
ಮೈಸೂರು: ವಿಜಯಪುರ ಜಿಲ್ಲೆಯ ಲಚ್ಯಾಣದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಅನುಕೂಲಕ್ಕಾಗಿ ಮೈಸೂರಿನಿಂದ ಲಚ್ಯಾಣ ಮಾರ್ಗವಾಗಿ ಸಂಚರಿಸುವ ಕೆಲ ರೈಲುಗಳಿಗೆ ಲಚ್ಯಾಣ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್‌ಅನ್ನು ಏ.11ರವರೆಗೆ ಲಚ್ಯಾಣದಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ. ಬೆಳಗ್ಗೆ 7.23ಕ್ಕೆ ಲಚ್ಯಾಣ ನಿಲ್ದಾಣಕ್ಕೆ ಆಗಮಿಸುವ ಸದರಿ ರೈಲು ಬೆಳಗ್ಗೆ 7.24ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 16535 ಮೈಸೂರು -ಪಂಢರಾಪುರ ಎಕ್ಸ್‌ಪ್ರೆಸ್‌ಅನ್ನು ಏಪ್ರಿಲ್ 11ರವರೆಗೆ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ. ಬೆಳಗ್ಗೆ 8.29ಕ್ಕೆ ಲಚ್ಯಾಣ ನಿಲ್ದಾಣಕ್ಕೆ ಆಗಮಿಸುವ ಸದರಿ ರೈಲು ಬೆಳಗ್ಗೆ 8.30ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 16536 ಪಂಢರಾಪುರ -ಮೈಸೂರು ಎಕ್ಸ್‌ಪ್ರೆಸ್‌ಅನ್ನು ಏ.12ರವರೆಗೆ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ. ಸಂಜೆ 4.19ಕ್ಕೆ ಲಚ್ಯಾಣ ನಿಲ್ದಾಣಕ್ಕೆ ಆಗಮಿಸುವ ಸದರಿ ರೈಲು ಸಂಜೆ 4.20ಕ್ಕೆ ನಿರ್ಗಮಿಸಲಿದೆ.
ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ಎಕ್ಸ್‌ಪ್ರೆಸ್‌ಅನ್ನು ಏ.12ರವರೆಗೆ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ. ಸಂಜೆ 5.29ಕ್ಕೆ ಲಚ್ಯಾಣ ನಿಲ್ದಾಣಕ್ಕೆ ಆಗಮಿಸುವ ಸದರಿ ರೈಲು ಸಂಜೆ 5.30ಕ್ಕೆ ನಿರ್ಗಮಿಸಲಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net